Tuesday, April 15, 2014

ಸಹಿಸಲಾರೆವು... ನಾವು ನಿಲ್ಲಿಸಿ ನಿಮ್ಮ ನಾಟಕ ಸಾಕು..... ಸಾಕು.....

                                               ಮತ್ತೆ ಮೊಳಗಿದೆ ರಣ ಕಹಳೆ
                                               ಭಾರತೀಯರಲ್ಲಿ ಮೂಡುತಿದೆ ಉತ್ಸಾಹದ ಸೆಲೆ
                                               ಬದಲಾವಣೆಗೆ , ಅರಾಜಕತೆ ತೊಡೆದು ಹಾಕಲು
                                               ಕಾದು ಕುಳಿತಿದೆ ಯುವ ಪಡೆ
                                                         
                                                                ದಶ ದಶಕಗಳೇ ಕಳೆದವು
                                                                 ನಾವು ಬಂದ ಮುಕ್ತರಾಗಿ
                                                                 ಆದರೇನು ಪ್ರಯೋಜನ
                                                                 ನಿಂತಿದೆಯೇ ಇಲ್ಲಿ ಗುಲಾಮಗಿರಿತನ?
                                             
                                              ಭಾರತದ ಪವಿತ್ರ ರಾಜಕಾರಣ
                                               ಅದು ಈಗ ನೋಡಲಾಗದ ಚಿತ್ರಣ
                                               ಕಾರಣ ಪ್ರಜಾಪ್ರಭುತ್ವದ ಬಿಲಕ್ಕೆ ನುಗ್ಗಿದೆ ಭಾರಿ ಹೆಗ್ಗಣ
                                               ಝಣ ಝಣವೆನ್ನುತಿದೆ ಕುರುಡು ಕಾಂಚಾಣ
         
                                                                  ಬದಲಾವಣೆ ಗಾಳಿ ಬೀಸುತಿದೆ
                                                                   ಭ್ರಷ್ಟರನ್ನು ಹೊಡೆದೋಡಿಸಲು
                                                                   ನಾವೇನು ಮೂರ್ಕರಲ್ಲ .... ನಿಲ್ಲಿಸಿ ನಿಮ್ಮ ಕಳ್ಳತನ
                                                                   ಉಳಿಸಿ ಕೊಳ್ಳುವೆವು ನಾವು ನಮ್ಮ ಸ್ವಾಭಿಮಾನ
                                                                     
                                                   ನಮಗೆ ಸಿಕ್ಕಿದೆ ನಮ್ಮ ಹಕ್ಕು
                                                   ಬಿಡಿಸುವೆವು ನಿಮ್ಮ ಸೊಕ್ಕು
                                                    ಅನಾಚಾರ, ಅರಾಜಕತೆಗೆ ನೀವು ನೀಡುವ ಕುಮ್ಮಕ್ಕು
                                                     ಸಹಿಸಲಾರೆವು... ನಾವು ನಿಲ್ಲಿಸಿ ನಿಮ್ಮ ನಾಟಕ ಸಾಕು..... ಸಾಕು..... 

Tuesday, April 1, 2014

ಎಪ್ರೀಲ್ ಬಂದಾಗ ನನಗೆ ಮೊದಲು ನೆನಪಾದವರು ಅವರು..................



ಅವನೊಬ್ಬ ಸಾಮಾನ್ಯ ಪೂಜಾರಿ ಹಳ್ಳಿಯ ಗುಡಿಯಲ್ಲಿ ದೇವಾತ  ಕಾರ್ಯದಲ್ಲಿ ತೊಡಗಿದ್ದ ಅವನು ಪ್ರತಿನಿತ್ಯ ಬರುವ ಭಕ್ತರ ಪೂಜಾ ಕಾರ್ಯವನ್ನು ನೆರವೆರುಸುತಿದ್ದ ಒಂದು ದಿನ ಶ್ರೀಮಂತ ಕುಟುಂಬವೊಂದು ಪಟ್ಟಣದಿಂದ ಬಂದಿಳಿದು ಪೂಜಾ ಕಾರ್ಯವನ್ನು ನೆರವೇರಿಸಿ ಪೂಜಾರಿಯ ಆರತಿ ತಟ್ಟೆಗೆ ಐದು ನೂರರ ಗರಿ ಗರಿ ಎರಡು ನೋಟುಗಳನ್ನು  ತುರುಕಿದರು ದಿನಾ ಹತ್ತು ಇಪ್ಪತ್ತು ಎನಿಸುತಿದ್ದ ಪೂಜಾರಿಗೆ ಪಟ್ಟಣದ ಶ್ರೀಮಂತರ ದೈವ ಭಕ್ತಿ ಬಂಡವಾಳವೆಂದು ಗೋಚರಿಸಿ ಮರುದಿನವೇ ಪಟ್ಟಣಕ್ಕೆ ಕಾಲ್ಕಿತ್ತು ಅಲ್ಲಿಯೆ ಒಂದು ಶನಿ ದೇವರ ಗುಡಿ ಕಟ್ಟಿ ಶ್ರೀಮಂತರಿಗೆ ಪೂಜಾ ಕಾರ್ಯವನ್ನು ನೆರವೇರಿಸಲು ಶುರು ಮಾಡಿದ. ತನ್ನ ದೈವ ಭಕ್ತಿಯ ನೀತಿ ನಿಯಮಗಳನ್ನು ಸಡಿಲಗೊಳಿಸಿದ. ಬದುಕಿನ ಜಂಜಾಟ, ಕೆಲಸದ ಒತ್ತಡದ ನಡುವೆಯೂ ನೂರಾರು ಶ್ರೀಮಂತ ಭಕ್ತರು ಈ ಪೂಜಾರಿಯೇ  ದೇವರ ರೂಪದಲ್ಲಿ ಬಂದಿದ್ದಾನೆ ಎಂದು ಪ್ರಾರ್ಥಿಸಿ ಗರಿ ಗರಿ ನೋಟುಗಳನ್ನು ಆರತಿ ತಟ್ಟೆಗೆ ಹಾಕುತಿದ್ದರು. ...... ಹೋದು ಇದು ಬುದ್ದಿವಂತರನ್ನು ಮೂರ್ಕರನ್ನಾಗಿಸುವ ಕಾರ್ಯ. ವಿದ್ಯಾವಂತರನ್ನು ಮೂರ್ಕರನ್ನಾಗಿಸುವ ಉಪಾಯ .







          ಹೌದು ಇಂತದ್ದೊಂದು ಪೂಜಾರಿಯ ಸಾಹಸಕ್ಕೆ ಕೈ ಹಾಕಿ ಯಶ ಕಂಡವರು ನಮ್ಮ ಅರವಿಂದ ಕೇಜ್ರೀವಾಲ್  . ಏಪ್ರೀಲ್ ತಿಂಗಳು ಬಂದಾಗ ನನಗೆ ಮೊದಲಿಗೆ ನೆನಪಿಗೆ ಬಂದವರು ಕೆಜ್ರೇವಾಲರು . ಹೌದು ನಾನು ಕೂಡ ಕೆಜ್ರೀವಾಲರ ಪಕ್ಕಾ ಅಭಿಮಾನಿ ..... ಆದರೆ ಅದು ಕೆಲ ತಿಂಗಳ ಹಿಂದೆ ......... ಭ್ರಷ್ಟಾಚಾರ ,ಆಡಳಿತದ ದುರುಪಯೋಗ, ಅಳುವ ಸರಕಾರದ ಅವ್ಯವಸ್ಥೆ .... ಇದೇ ಕೆಜ್ರೀವಾಲರ ಬಂಡವಾಳಗಳು ..... ಕೇಜ್ರೀವಾಲರು ವಿದ್ಯಾವಂತರನ್ನು ಮೂರ್ಕರನ್ನಾಗಿಸಿದ ಅವರ ಕಾರ್ಯಕ್ಕೆ ಯಾವ ಪದವಿ ನೀಡಿದರೂ ಸಾಲದು . ಆಡಳಿತ ನಡೆಸುವುದು ಮಕ್ಕಳಾಟವೆಂದು ಕೇಜ್ರೀವಾಲರು ತಮ್ಮನ್ನು ತಾವು ಉಳಿಸಿಕೊಳ್ಳಲು ಅದಕ್ಕಾಗಿ ಅವರು ಹೆಣೆದ ಸುಳ್ಳಿನ ಸರಮಾಲೆ ಒಂದೇ .... ಎರಡೇ ... ಒಟ್ಟಿನಲ್ಲಿ ಭ್ರಷ್ಟ ವ್ಯವಸ್ಥೆಯೆಂಬ ಬಿಸಿಲ ಬೇಗೆಯಿಂದ ಬಸವಳಿದಿದ್ದ ದೆಹಲಿ ಜನತೆಗೆ ಕೇಜ್ರೀವಾಲರು ತಂಪೆರೆಯುವ ನೀರಿನಂತೆ ಕಂಡರೂ .... ಅದೇ ನೀರು ವಿಷಪೂರಿತ ಎಂದು ತಿಳಿಯುವ ಮೊದಲೇ .. ಕಾಲ ಮಿಂಚಿತ್ತು .

         ೨೦೧೧ ರಲ್ಲಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿದಾಗ ಇಡೀ ದೇಶವೇ ಅವರನ್ನು ಬೆಂಬಲಿಸಿ ಬೀದಿಗಿಳಿಯಿತು. ಜನಲೋಕಪಾಲ್ ಮಸೂದೆಗೆ ಅಣ್ಣಾ ನಡೆಸುತಿದ್ದ ಹೋರಾಟದಲ್ಲಿ ಅವರನ್ನು ಬೆಂಬಲಿಸಿದವರಲ್ಲಿ ಕೇಜ್ರೀವಾಲರು ಒಬ್ಬರು. ಆದರೇ ಇದೆ ಅಣ್ಣಾ ಹಜಾರೆಯವರ ಹೋರಾಟವನ್ನು ಬಂಡವಾಳವನ್ನಾಗಿಸಿ ಕೇಜ್ರೀವಾಲರು ರಾಜಕೀಯ ರಂಗ ಪ್ರವೇಶಿಸಿದರು. ಯು.ಪಿ. ಯೆ  ಸರಕಾರದ ೨ಜಿ , ಕಾಮನ್ವೆಲ್ತ್ , ಕಲ್ಲಿದ್ದಲು ಹೀಗೆ ಸಾಲು ಸಾಲು ಹಗರಣಗಳು ಕೆಜ್ರೀವಾಲರಿಗೆ ವರವಾಗಿ ಪರಿಣಮಿಸಿದವು . ಆಮ್ ಆದ್ಮಿ ಪಕ್ಷವನ್ನು ಕಟ್ಟಿದ ಕೇಜ್ರೀವಾಲರು ಸುಮಾರು ೧೫ ವರುಷಗಳಿಂದ ಆಡಳಿತ ನಡೆಸುತಿದ್ದ ಕಾಂಗ್ರೇಸ್ ಸರಕಾರವನ್ನು ಧೂಳಿಪಟ ಮಾಡಿದರು . ಬೆಲೆಯೇರಿಕೆ ಭ್ರಷ್ಟ ವ್ಯವಸ್ತೆಯಿಂದ ಕಂಗೆಟ್ಟಿದ್ದ ದೆಹಲಿ ಜನತೆ ಭರಪೂರ ಬೆಂಬಲ ನೀಡಿದರು . ... ಆದರೆ ಬಹುಮತ ಸಿಗಲಿಲ್ಲ ..... .... ಇಲ್ಲಿಂದಲೇ ಶುರುವಾಯಿತು ಕೇಜ್ರೀವಾಲರ ನೌಟಂಕಿ ಖದರ್... ಅದಾಗಲೇ ಕೆಜ್ರೀವಲಾಲರಲ್ಲಿ  ಅಧಿಕಾರದ ಆಸೆ ಮನದಲ್ಲಿ ಚಿಗುರೊಡೆದಿತ್ತು . ಚುನಾವಣ ಪೂರ್ವ ತಾನು ವಿರೋಧಿಸುತಿದ್ದ, ಭ್ರಷ್ಟರ ಪಕ್ಷವೆಂದು ಕಂಡ ಕಂಡಲ್ಲಿ ಬೊಗಳೆ ಬಿಡುತಿದ್ದ ಕೇಜ್ರೀವಾಲರು ಅದೇ ಕಾಂಗ್ರೇಸ್ ಪಕ್ಷದ ಬೆಂಬಲ ಪಡೆದು ಸರಕಾರ ರಚಿಸಿದರು . ಆದರೆ ಬುದ್ದಿವಂತ ಕೆಜ್ರೀವಾಲರಿಗೆ ತನ್ನ ಜುಟ್ಟು ಕಾಂಗ್ರೇಸ್ ಕೈಯಲ್ಲಿರುವುದು ತಿಳಿಯಲೇ ಇಲ್ಲ. ತಮ್ಮ ಒಂದೊಂದೇ ನಿಲುವುಗಳನ್ನು ಸಡಿಲಿಸುತ್ತಾ ಬಂದ ಕೆಜ್ರೀವಾಲ್ ದೆಹಲಿಯ ಆಡಳಿತ ವ್ಯವಸ್ಥೆಯನ್ನು ಬೀದಿಗೆ ತಂದಿತ್ತರು. ತಾನು ನೀಡಿದ ಭರವಸೆಗಳನ್ನು ಪೂರೈಸಲು ಸಾಧ್ಯವಾಗದೆ ಇದ್ದಾಗ ಪಕ್ಷದೊಳಗಿಂದಲೇ ಭಿನ್ನಮತವೆಂಬ ಹೊಸ ನಾಟಕ ಶುರುವಾಯಿತು . ಅಧಿಕಾರದ ಅಮಲಿನಲ್ಲಿ ಕೆಲ ಮಂತ್ರಿಗಳು ಕಾನೂನು ವ್ಯವಸ್ತೆಯನ್ನು ಕಡೆಗಣಿಸಿ ಎಲ್ಲೆ ಮೀರಿ ವರ್ತಿಸಿದರು . ಮುಖ್ಯಮಂತ್ರಿಯಾಗುವ ಮೊದಲು ಸರಕಾರೀ ಕಾರು ,ಬಂಗಲೆ ಬಯಸುವುದಿಲ್ಲ ಎಂದಿದ್ದವರು ಕೆಲವೇ ದಿನಗಳಲ್ಲಿ ಅದನ್ನು ಬಾಚಿ ತಬ್ಬಿಕೊಂಡರು. ಚುನಾವಣಾ ಪೂರ್ವ ದೆಹಲಿ ಮಾಜಿ ಮುಖ್ಯಮಂತ್ರಿಯ ಹಗರಣಗಳ ಬಗ್ಗೆ ನನ್ನಲ್ಲಿ ದಾಖಲೆಗಳಿವೆ .... ಅಧಿಕಾರಕ್ಕೆ ಬಂಡ ಕೂಡಲೇ ಅವರನ್ನು ಜೈಲಿಗಟ್ಟುವುದಾಗಿ ಹುಲಿಯಂತೆ ಬೊಬ್ಬಿರಿದ ಕೇಜ್ರೀವಾಲರು ಕೊನೆಗೆ ಇಲಿಯಂತೆ ದಾಖಲೆಗಲಿದ್ದರೆ ನೀಡಿ ಎಂದು ಜನತೆಗೆ ಸವಾಲೆಸೆದರು. ತಾನು ನೀಡಿದ ಸುಳ್ಳು ಭರವಸೆಗಳನ್ನು ಪೂರೈಸಲು ಸಾದ್ಯವಿಲ್ಲ ಎಂದು ಅರಿವಾದ ಕೂಡಲೇ ಅವರಿಗೆ ನೆನಪಾದದು ... ಮತ್ತೆ ಅದೇ ಜನಲೊಕಪಲ್...... ತನಗಿಷ್ಟ ಬಂದಂತೆ ಕಾನೂನು ಕಡೆಗಣಿಸಿ ಜನಲೋಕಪಾಲ್ ಜಾರಿಗೆ ತರಲು ಹೋರಾಟ ಕೇಜ್ರೀವಾಲರು ಅದು ಸಾಧ್ಯವಾಗದೆ ಹೋದಾಗ ಅದನ್ನೇ ನೆಪವಾಗಿಟ್ಟುಕೊಂಡು ತನ್ನ ನಾಟಕಕ್ಕೆ ತೆರೆ ಎಳೆದರು .........                                                    
 ಕೇವಲ ೪೮ ದಿನಗಳಲ್ಲಿ ಅವರ ನಿಜವಾದ ಬಣ್ಣವನ್ನು ದೆಹಲಿ ಜನತೆ ಕಂಡಿತು ...... ಅಷ್ಟಕ್ಕೂ ದೆಹಲಿ ಜನ ಅವರಿಂದ ನಿರಿಕ್ಷೀಸಿದ್ದು ಕೇವಲ ಜನಲೋಕಪಾಲ್ ಮಾತ್ರವಲ್ಲ ........ಉತ್ತಮ ಆಡಳಿತ , ಭ್ರಷ್ಟರ ಸಂಹಾರ , ಬೆಲೆಯೇರಿಕೆಗೆ ಕಡಿವಾಣ , ...... ಆದ್ರೆ ಮಾತಿನಲ್ಲಿ ಮಾತ್ರ ಸಾದಿಸುತಿದ್ದ ಕೇಜ್ರೀವಾಲರು ಕೃತಿಯಲ್ಲಿ ತರಲು ವಿಫಲರಾದರು ........ಕೊನೆಗೆ ಅವರು ದೂಷಿಸಿದ್ದು ಬಿ. ಜೆ. ಪಿ ಪಕ್ಷವನ್ನು .... ಅಧಿಕಾರದ ಆಸೆಗಾಗಿ ಕುತಂತ್ರ ನಡೆಸಿದರೆಂದು ............. ಎಷ್ಟೊಂದು ಹಾಸ್ಯಾಸ್ಪದ ......

ಈಗ ಮತ್ತೆ ವಿದ್ಯಾವಂತರನ್ನು ಮೂರ್ಖರನ್ನಾಗಿಸುವ ನಾಟಕ ಭಾಗ - ೨ ಕ್ಕೆ ಕೇಜ್ರೀವಾಲರು ರೆಡಿಯಾಗುತಿದ್ದಾರೆ . ಇಡೀ ದೇಶವೇ ಬಲಿಷ್ಠ ನಾಯಕನ ನಿರೀಕ್ಷೆಯಲ್ಲಿದ್ದರೆ ಕೇಜ್ರೀವಾಲರು ಮಾತ್ರ ಭ್ರಷ್ಟ ಸರಕಾರದೊಂದಿಗೆ ಕೈ ಜೋಡಿಸಿ ಅರಾಜಕತೆಯನ್ನು ಮುಂದುವರಿಸಲು ಸಹಕರಿಸುತಿದ್ದಾರೆ . ........ ದೇಶದ ಒಳಿತನ್ನು ಬಯಸುವ ಪ್ರತಿಯೊಬ್ಬ ಭಾರತೀಯನ ಪ್ರಶ್ನೆ ...... ಕೆಜ್ರೀವಾಲರೆ .... ನಿಮ್ಮ ಈ ನಾಟಕಕ್ಕೆ ಕೊನೆ ಯಾವಾಗ ? ...... .......ಉತ್ತರ ಕೂಡ ನಾವೇ ಬರೆಯಬೇಕಾಗಿದೆ ...............