ಮೊನ್ನೆ ನವೆಂಬರ್ ೧೦ ನೇ ತಾರೀಕು ಮುಂಜಾನೆ ನಿದ್ದೆಯಿಂದ ಎದ್ದಾಗ ನನ್ನ ಮೊಬೈಲ್ ಒಂದೇ ಸಮನೆ ಬಡಿದು ಕೊಳ್ಳುತಿತ್ತು . ಕಣ್ಣೊರೆಸಿ ಕರೇ ಸ್ವೀಕರಿಸಿದಾಗ ಆ ಕೆಡೆಯಿಂದ ಶೆಟ್ರೇ ದಾದಾ ಮಾರೆ ಆ ಮೋದಿಗ್ ವಾ ಮರ್ಲ್ ಮಾರೆ .. ಪರ್ಸ್ ಡ್ ೫೦೦ ರೂಪಾಯಿ ನೋಟ್ ಬುಡ್ದು ಬೇತೆ ದಾಲ ಇಜ್ಜಿ ( ಏನ್ ಶೆಟ್ರೇ ಆ ಮೋದಿ ಯಾವ ಹುಚ್ಚು ನನ್ನ ಪರ್ಸಲ್ಲಿ ೫೦೦ ಬಿಟ್ರೆ ಬೇರೆ ಏನು ಇಲ್ಲ) ಹೀಗೆ ಊರಿಗೆ ಹೋದ ಮಿತ್ರನೊಬ್ಬ ಬಡಬಡಿಸುತಿದ್ದ . ನಾನು ಸಮಾಧಾನವಾಗಿ ಮೋದಿಜಿ ಒಳ್ಳೆ ಕೆಲಸ ಮಾಡಿದ್ದಾರೆ ಅಂತ ಕೆಟ್ಟ ಮಾತು ಬರಕೂಡದು ಎಂದು ತಿಳಿ ಹೇಳಿದರೂ ಆ ಕೆಡೆಯಿಂದ ಅಣಿ ಮುತ್ತುಗಳು ಉದುರುತ್ತಲೇ ಇದ್ದವು . ಇದೇ ಮನುಷ್ಯ ಎರಡು ವರುಷಗಳ ಹಿಂದೆ ತನ್ನ ಅಪ್ಪನ ಹೆಸರನ್ನು ಸೇರಿಸಿಕೊಳ್ಳದೆ ತನ್ನ ಹೆಸರಿನ ಮುಂದೆ ನಮೋ ಎಂದು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ ಕೊಡುತಿದ್ದ . ಆಗ ಅವನು ಭಕ್ತ ಎಲ್ಲಿ ಹೋದರಲ್ಲಿ ಜೈ ಎನ್ನುತಿದ್ದ .. ದೇಶದ ಬಗ್ಗೆ ಹಲವು ಕನಸು ಕಾಣುತ್ತ ತಾನಿರುವ ಕುಂದಾಪುರ ಸಿಂಗಾಪುರದಂತೆ ಆಗಬೇಕೆಂದು ಕೊಚ್ಚಿಕೊಳ್ಳುತ್ತಿದ್ದ . ಆದರೆ ಒಂದು ಸರತಿ ಸಾಲು ಅವನನ್ನು ಬದಲಾಯಿಸಿತು ... !
ಇದು ಇವನೊಬ್ಬನ ಕತೆಯಲ್ಲ ಹಲವಾರು ಮಂದಿ ಮೋದಿಯನ್ನು ಶಪಿಸುತಿದ್ದಾರೆ ಇದು ಭಕ್ತರೆನಿಸಿಕೊಂಡವರನ್ನೂ ಬಿಟ್ಟಿಲ್ಲ ..! ಹೌದು ಇದು ಭಾರತೀಯರ ದೌರ್ಬಲ್ಯ . ನಾವು ಕಾಣುವ ಕನಸುಗಳು ಆಕಾಶದಲ್ಲಿರುತ್ತವೆ ಆದ್ರೆ ಅದೇ ಕನಸುಗಳನ್ನು ಸಾಕಾರಗೊಳಿಸಲು ನಾವು ನೀಡುವ ಕೊಡುಗೆ ಪಾತಾಳದಲ್ಲಿರುತ್ತವೆ . ಬೇರೆ ದೇಶಗಳೊಂದಿಗೆ ನಮ್ಮನ್ನು ಹೋಲಿಸಿ ಕೊಳ್ಳುತ್ತೇವೆ . ಸಲಹೆಗಳನ್ನು ನೀಡುತ್ತಾ ಪೇಪರ್ ಹುಲಿಗಳಾಗಿ ಮೆರೆಯುತ್ತೇವೆ . ಅಲ್ಲಿಯವರಿಗೆ ಸಾಧ್ಯವಾಗಿರುವುದು ನಮಗ್ಯಾಕಿಲ್ಲ ಎಂದು ಪ್ರಶ್ನಿಸುತ್ತಾ ಕಡೆಗೆ ಆಳುವ ನಾಯಕನನ್ನು ದೂಷಿಸುತ್ತೇವೆ . ಸಮರ್ಥ ನಾಯ್ಕ ಸಿಕ್ಕರೂ ಎಲ್ಲವೂ ಅವನ ಮೇಲೆ ಹೇರಿ ಅವನನ್ನು ದೇವಲೋಕದಿಂದ ಬಂದ ಯುಗ ಪುರುಷ .. ನಮ್ಮನ್ನು ಉದ್ಧರಿಸಲು ಬಂದ ದೇವದೂತ ಎಂದು ಕೊಳ್ಳುತೇವೆ . ಆದ್ರೆ ಅದೇ ಯುಗ ಪುರುಷ ದೇಶದ ಒಳಿತಿಗೆ ಒಂದು ಗಟ್ಟಿ ನಿರ್ಧಾರ ಕೈಗೊಂಡರೆ ಮೈ ಪರಚಿಕೊಳ್ಳುತೇವೆ ...! ಅವನೆಡೆಗೆ ನ್ನಮ್ಮ ನೋಟವೇ ಬದಲಾಗುತ್ತದೆ , ಅವನನ್ನು ಖಳ ನಾಯಕನಂತೆ ಬಿಂಬಿಸುತ್ತೆವೆ .
ಮೋದಿಜೀ ಅವರ ನಿರ್ಧಾರವನ್ನು ಮುಕ್ತ ಮನಸಿನಿಂದ ಸ್ವಾಗತಿಸಿದವರು ಒಂದು ಕ್ಷಣ ತಮ್ಮ ಕಷ್ಟವೆಲ್ಲಾ ದೂರವಾಯಿತು ಇನ್ನೇನು ಕಪ್ಪು ಹಣವೆಲ್ಲಾ ಹೊರಗೆ ಬಂದು ದೇಶ ಸಂಪನ್ನವಾಯಿತು ಎಂದು ನಿಟ್ಟುಸಿರು ಬಿಡಬೇಕಾದರೆ ತನ್ನಲ್ಲಿರುವ ಹಳೆ ನೋಟುಗಳನ್ನು ಬದಲಾವಣೆಗೆ ಕ್ಯೂ ನಿಂತಾಗ ಮೋದಿ ಬಗೆಗಿನ ಭಾವನೆ ಬದಲಾಗುತ್ತದೆ ..! ದೂರದ ಸಿಂಗಾಪುರದ ಅಲ್ಲಿನ ಸೌಕರ್ಯಗಳು ಎಲ್ಲವು ನಮ್ಮ ಕನಸಲ್ಲಿರುತ್ತದೆ ಆದರೆ ಅದಕ್ಕೆ ಬೇಕಾಗುವ ಪೂರಕ ವಾತಾವರಣ ಕಲ್ಪಿಸಲು ಸೋಲುತ್ತೆವೆ .
ಅಧಿಕ ಮೌಲ್ಯದ ನೋಟು ನಿಷೇಧದ ನಂತರ ದೇಶದಲ್ಲಿ ಒಂದು ಬಗೆಯ ಆತಂಕ ಎದುರಾಗಿದೆ ನಿಜ , ಆದರೆ ಅದು ಹುಟ್ಟಿಕೊಂಡದ್ದಲ್ಲ ಅದನ್ನು ಸೃಷ್ಟಿಸಿದ್ದು ..! ಪ್ರಸ್ತುತ ಬ್ಯಾಂಕ್ ಮುಂದೆ ಕ್ಯೂ ನಿಂತಿರೋದು ಬಡವರು ಮತ್ತು ಮಧ್ಯಮ ವರ್ಗದವರು ಕಾಳ ಧನಿಕರು ಇನ್ನೂ ಹೊರಬಂದಿಲ್ಲ , ಅವರಿನ್ನೂ ತಮ್ಮ ಕಾಳ ಧನವನ್ನು ಮುಚ್ಚಿಡುವ ಯೋಚನೆಯಲ್ಲೇ ತೊಡಗಿದ್ದಾರೆ . ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಗಳಿಗೆ ಕೂಡಿಟ್ಟ ಹಣವನ್ನು ಹೇಗೆ ವಿಲೇವಾರಿ ಮಾಡುವುದು ಹಾಗೂ ಮುಂದೇನು .. ? ಎಂಬ ಗೊಂದಲದಲ್ಲಿವೆ ಅದಕ್ಕಾಗಿ ಜನ ಸಾಮಾನ್ಯ ಪಡುವ ಕಷ್ಟಗಳನ್ನು ಮುಂದೆ ತಂದು ಬಲೆಯಿಂದ ತಾವು ಹೇಗೆ ಪಾರಾಗಬಹುದು ಆಲೋಚನೆಯಲ್ಲಿವೆ . ಪ್ರತಿ ಪಕ್ಷಗಳಂತೂ ರಣ ಹದ್ದುಗಳಂತೆ ಮೋದಿ ಮೇಲೆರಗುತ್ತಿವೆ . ಇದು ಮೋದಿಜಿಗೇನೂ ಅನೀರಿಕ್ಷಿತವಲ್ಲ , ಹಗರಣದಲ್ಲೇ ೭೦ ವರುಷ ದೇಶವಾಳಿದವರಿಂದ ಇನ್ನೇನು ನಿರೀಕ್ಷಿಸಲಾದೀತು .. ?
ನಮ್ಮಲ್ಲೊಂದು ಆಸೆ ಭಾರತ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳ ಹಣೆಪಟ್ಟಿಯಿಂದ ಹೊರಬಂದು ಅಭಿವೃದ್ಧಿಯಾದ ರಾಷ್ಟ್ರ ಎಂಬ ಹಣೆ ಪಟ್ಟಿಕೊಳ್ಳಬೇಕೆಂದು , ಅದಕ್ಕಾಗಿ ನಾವು ಈಗ ನಮ್ಮ ತಾಳ್ಮೆ ಮತ್ತು ಸಂಯಮವನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕಿದೆ . ಕ್ಯೂ ನಲ್ಲಿ ನಿಂತು ಸತ್ತರೂ ಅಲ್ಲಿ ಸತ್ತರು , ಇಲ್ಲಿ ಸತ್ತರು ಎಂದು ವಿರೋಧಿಗಳು ಹಬ್ಬಿಸುವ ವದಂತಿಗಳಿಗೆ ಕಿವಿಗೊಡದೆ ಇದು ನನ್ನ ರಾಷ್ಟ್ರ .. ನನ್ನ ನಾಯಕ ಎಂಬ ದ್ಯೇಯವನ್ನು ಮನದಲ್ಲಿ ಅಳವಡಿಸಬೇಕಿದೆ . ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುವ ಉಚಿತ ಪಂಚೆ ಸೀರೆಗಳಿಗೆ ಮುಗಿಬಿದ್ದು ಕಾಲ್ತುಳಿತಕ್ಕೆ ಬಲಿಯಾದ ಉದಾಹರಣೆಗಳು ನಮ್ಮಲ್ಲಿವೆ , ಆದ್ರೆ ಅದು ದೊಡ್ಡ ಸುದ್ದಿಯಾಗಲ್ಲ . ಕಾಳ ಧನಿಕರ , ವಂಚಕರ ಬುಡಕ್ಕೆ ಬೆಂಕಿ ಬಿದ್ದಾಗ ಸಹಜ ಸಾವಿಗೂ ಅಂತೆ ಕಂತೆಗಳು ಹುಟ್ಟಿಕೊಳ್ಳುತ್ತವೆ . ಈ ದೇಶ ಒಬ್ಬನಿಂದ ನಿರ್ಮಿತವಾದುದಲ್ಲ , ಒಬ್ಬನಿಂದ ಉದ್ದಾರವಾದುದಲ್ಲ , ಒಬ್ಬನಿಂದ ಉದ್ದಾರವಾಗುವುದೂ ಇಲ್ಲ . ಐದು ಬೆರಳು ಸೇರಿದರೆ ಮುಷ್ಠಿ ಹಾಗೆ ನಮ್ಮ ನಾಯಕನೊಂದಿಗೆ ನಾವು ಸೇರಿದರೆ ಭವ್ಯ ಭಾರತ .. ! ಆಗ ಮಾತ್ರ ಕುಂದಾಪುರಕ್ಕೆ ಸಿಂಗಾಪುರದ ಕನಸುಗಳ ಬೀಜ ಬಿತ್ತಬಹುದು ...!
ಕನಸಿನೊಂದಿಗೆ ಕೊಡುಗೆಯೂ ಆಗಸದಲ್ಲಿರಬೇಕು ... !
ರಾಜೇಶ್ ಶೆಟ್ಟಿ