Wednesday, February 25, 2015

ಕೆಲವರು ಬೊಬ್ಬಿರಿವರು ....
ಇದೇನಿದು ನೈತಿಕ ಪೋಲಿಸ್ ಗಿರಿ ?
ನಾವಿರುವುದು ಇಪ್ಪತ್ತೊಂದನೆ ಶತಮಾನದಲ್ಲಿ ...... !
ಹೊಂದಿ ಕೊಳ್ಳಿ ಪ್ರಸ್ತುತ ಸನ್ನಿವೆಶಕ್ಕೆಂದು ....

           ಹೌದು ನಾವಿರುವುದು ೨೧ ನೇ ಶತಮಾನದಲ್ಲಿ
            ಆದರೆ ನಮಗಿರುವುದು ಅದೇ ತಾಯಿ , ಅಕ್ಕ,ತಂಗಿ
            ಶತಮಾನ ಕಳೆದರೂ ಅಳಿಸಲಾರೆವು ನಾವು ನಮ್ಮ ಸಂಸ್ಕೃತಿ
            ಹೇಗೆ ಸಹಿಸಲಿ ಜಿಹಾದಿಗಳ ಧರ್ಮಾಂದ ವಿಕೃತಿ

ಬುದ್ದಿ ಜೀವಿಗಳೇ ಆಲಿಸಿ ಸ್ವಲ್ಪ ಇತ್ತ
ಸ್ವಲ್ಪ ಕಣ್ತೆರೆದು ನೋಡಿ ನಿಮ್ಮ ಸುತ್ತ ಮುತ್ತ
ಸಹಾಸ್ರರು ಸಹೋದರಿಯರು ಬಲಿಯಾಗಿಹರು ಕಪಟಿಗಳ ಪ್ರೇಮ ಪಾಶದತ್ತ
ಅವರನ್ನು ಆ ಪಾಪದ ಕೂಪದಿಂದ ಮೇಲೆತ್ತುವುದು ತಪ್ಪಾ ...?

           ವಿದ್ಯಾವಂತ ಮೂರ್ಖರೇ ..........
            ದೇಶವೂ ಮುಂದುವರೆದಿದೆ ......
            ಜೊತೆಗೆ ನಾವು ಬದಲಾಗಬೇಕಿದೆ .......
            ಆದರೆ ಅದು ನಮ್ಮನ್ನು ಇನ್ನೊಬ್ಬರಿಗೆ ಅಡವಿಟ್ಟು ... ಅಲ್ಲ
            ಹಾಗೆ ಆದರೆ .... ಅದು ನಾವು ನಾವಲ್ಲ ..................

Monday, February 23, 2015

ನನ್ನ ಧರ್ಮವ ನಾ ಪ್ರೀತಿಸಿದರೆ ತಪ್ಪೇನು ?
ಯಾಕೆನ್ನುತ್ತೀರಿ ನನ್ನ ಕೊಮುವಾದಿಯೆಂದು .....?
ಅನ್ಯ ಧರ್ಮದ ಮೇಲೆ ನಿಮ್ಮ ಮಮಕಾರ
ಅದೇನು ಜಾತ್ಯಾತೀತ ಮನೋಭಾವದ ಸಾರ ........!

            ನನಗೂ ನಿಮಗೂ ವ್ಯತ್ಯಾಸವಿದೆ
            ನಾನು ಶುದ್ದ ಹಳದಿ ಬಣ್ಣದ ಲೋಹ
           ಆದರೆ ನೀವು ಹಳದಿ ಲೇಪನದ ಕಬ್ಬಿಣ
           ಅದೇ ನಿಮ್ಮ ಬಣ್ಣ ಬದಲಿಸುವ ಗುಣ

ಗೀತೆ ಭೋಧಿಸಿದ್ದು ಅದನ್ನೇ ......
ಬೈಬಲ್ ಹೇಳಿದ್ದು ಅದನ್ನೇ .......
ಕುರಾನ್ ಉದ್ಗರಿಸಿದ್ದು ಅದನ್ನೇ ........
ನಿನಗೆ ನೀನು ಶ್ರೆಷ್ಟನಾಗೆಂದು ... ಸರ್ವರನ್ನು ಪ್ರೀತಿಸೆಂದು

              ಇಲ್ಲ ಸಲ್ಲದ ಹೇಳಿಕೆ ನೀಡುವಿರಿ
              ಧರ್ಮವನ್ನು ಜರಿದು ಮಾತನಾಡುವಿರಿ
              ಇದ್ಯಾರನ್ನು ಮೆಚ್ಚಿಸುವ ಪರಿ
               ಯಾಕೆ ಬಾಳುತ್ತೀರಿ ನಿಮ್ಮ ತನವನ್ನು ಪರರಿಗೆ ಮಾರಿ

ಎದೆ ತಟ್ಟಿ ಹೇಳುವೆನು ನಾನೊಬ್ಬ ಹಿಂದೂ
ಆದರೆ ಅರ್ಥೈಸದಿರಿ ನಾನೊಬ್ಬ ಧರ್ಮಾಂದನೆಂದು ...... !
ರಾಷ್ಟ ಪ್ರೇಮ ಬಂದಾಗ ನಾವೆಲ್ಲಾ ಒಂದು
ಜೈಕಾರ ಹಾಕುವೆ ಭಾರತ ಮಾತೆಗೆ ಎಂದೂ ...........





Wednesday, February 11, 2015

ಆಪ್ ಗೆದ್ದಿತು ........ ಕಾಂಗ್ರೆಸ್ ಸೋತಿತು ........... ಬಿ ಜೆ ಪಿ ಯನ್ನು ಸೋಲಿಸಿತು ...................

ದೆಹಲಿ ಚುನಾವಣಾ ಫಲಿತಾಂಶದ ನಂತರ ನನ್ನ ಮಿತ್ರರೊಬ್ಬರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ನಲ್ಲಿ ಒಂದು ಸಾಲಿನ ಒಂದು ಪೋಸ್ಟ್ ಪ್ರಕಟಿಸಿದ್ದರು . ಆ ಒಂದು ಸಾಲಿನ ವಾಕ್ಯದಲ್ಲಿ ನೂರಾರು ಅರ್ಥಗಳು ಗೋಚರಿಸುತಿದ್ದವು  " ಆಪ್ ಗೆದ್ದಿತು ದೆಹಲಿ ಸೋತಿತು " ನಾನು ಆ ಪೋಸ್ಟ್ ಗೆ ಜಸ್ಟ್ ಒಂದು ಲೈಕ್ ಮಾಡಿದೆ ಯಾವುದೇ ಕಾಮೆಂಟ್ ನೀಡಲಿಲ್ಲ . ಆ ಪೋಸ್ಟ್ ಗೆ ಕಾಮೆಂಟ್ ಮಾಡಲು ಕಾಲಾವಕಾಶ ಬೇಕಿದೆ . ಹೌದು ಯಾರೂ ನಿರೀಕ್ಷಿಸದ ಜಯಭೇರಿ ಆಮ್ ಆದ್ಮಿ ಪಾಲಾಗಿದೆ . ಕೆಜ್ರೇವಾಲರು ಪೂರ್ಣ ಬಹುಮತದೊಂದಿಗೆ ಮುಖ್ಯ ಮಂತ್ರಿಯಾಗುತಿದ್ದಾರೆ . ಸರಿ ಸುಮಾರು ಒಂದು ವರುಷದ ಹಿಂದೆ ೪೯ ದಿನಗಳ ಆಡಳಿತ ನಡೆಸಿ  ರಾಜಿನಾಮೆ ನೀಡಿದ ಕೇಜ್ರೀವಾಲರ ಪೊರಕೆಯನ್ನು ಮತದಾರ ಪ್ರಭು ಮತ್ತೆ ಅಪ್ಪಿ ಕೊಂಡಿದ್ದಾನೆ . ಜನತೆಯ ಆಶೋತ್ತರಗಳನ್ನು ಪೂರೈಸಲು ಆಮ್ ಆದ್ಮಿ ನಾಯಕನಿಗೆ ದೆಹಲಿ ಜನತೆ ಸುವರ್ಣ ಅವಕಾಶ ನೀಡಿದ್ದಾರೆ . ಕಾಂಗ್ರೆಸ್ ಸರಕಾರದ ಮಂತ್ರಿಯೊಬ್ಬರ ( ಕಪಿಲ್ ಸಿಬಲ್) ಸವಾಲನ್ನು ಸ್ವೀಕರಿಸಿ ರಾಜಕೀಯ ಪ್ರವೇಶ ಮಾಡಿದ ಕೇಜ್ರೀವಾಲರು ದೇಶದಲ್ಲಿ ಅದ್ಭುತ ಅಲೆಯೊಂದನ್ನು ಎಬ್ಬಿಸಿದ್ದಾರೆ . ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಬುಡ ಮೇಲು ಮಾಡಿ ದೆಹಲಿ ವಿಧಾನ ಸಭೆಯ ತುಂಬಾ ಆಮ್ ಆದ್ಮಿಗಳು ತುಂಬುವಂತೆ ಮಾಡಿದ್ದಾರೆ . ಕೇಜ್ರೀವಾಲರ ಈ ಗೆಲುವನ್ನು ಕೆಲವರು ಇದು ಮೋದಿ ವಿರುದ್ದದ ಗೆಲುವು , ಮೋದಿ ಅಲೆ ಕಡಿಮೆಯಾಗಿದೆ , ಮೋದಿ ಮ್ಯಾಜಿಕ್ ನಡೆಯಲಿಲ್ಲ .... ಬಿ ಜೆ ಪಿ ನೆಲ ಕಚ್ಚುತಿದೆ ಎಂದು ಬಣ್ಣಿ ಸುತಿದ್ದಾರೆ . ಆದರೆ ನಿಜಾವಾಗಿಯು ಮೋದಿ ಅಲೆ ಕಡಿಮೆಯಾಯಿತೇ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಅರಿವಿಗೆ ಬರುವುದು ಇದು ಬಿ ಜೆ ಪಿ ಯ ಸೋಲಲ್ಲ . ಬದಲಾಗಿ ಇದು ಕಾಂಗ್ರೆಸ್ ಮುಕ್ತ ಭಾರತದ ಮತ್ತೊಂದು ಹೆಜ್ಜೆಯೆಂದು .

        ಹೌದು ೨೦೧೩ ರ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ೨೬,೭೫,೮೫೭ ಮತಗಳನ್ನು ಪಡೆದಿದ್ದರೆ ೨೦೧೫ ರ ವಿಧಾನ ಸಭಾ ಚುನಾವಣೆಯಲ್ಲಿ ೨೯,೩೬,೩೯೦ ಮತಗಳನ್ನು ಪಡೆದಿದೆ . ಅಂದರೆ ಬಿ ಜೆ ಪಿ ಯ ಮತ ಗಳಿಕೆಯಲಿ ವ್ಯತ್ಯಾಸವಾಗಿಲ್ಲ . ಹಾಗಾದರೆ ಆಮ್ ಆದ್ಮಿ ಹೇಗೆ ಗೆಲುವು ಕಂಡಿತು ಎಂಬ ಪ್ರಶ್ನೆ ಬಂದಾಗ ನಮಗೆ ಗೋಚರಿಸುವುದು ಕಾಂಗ್ರೆಸ್ಸನ ಶೋಚನೀಯ ಸ್ಥಿತಿ . ಕಾಂಗ್ರೆಸ್ ದೆಹಲಿಯಲ್ಲಿ ಖಾತೆ ತೆರೆಯದೆ ಸುಮಾರು ೬೩ ಅಭ್ಯರ್ಥಿಗಳು ಟೆವಣಿ ಕಳೆದು ಕೊಂಡದ್ದು ಆಪ್ ಪಾಲಿಗೆ ವರದಾನವಾಯಿತು , ಬಿ ಜೆ ಪಿ ಯನ್ನು ಸೋಲಿಸಿತು ಅಂದರೆ ಕಾಂಗ್ರೆಸ್ ಮತ ಬ್ಯಾಂಕ್ ಸೃಷ್ಟಿಸುತಿದ್ದ ಅಲ್ಪ ಸಂಖ್ಯಾತ ಮತದಾರರಿಗೆ ಕಾಂಗ್ರೆಸ್ ಬಿಟ್ಟು ಇನ್ನೊಂದು ಅವಕಾಶ ಸಿಕ್ಕಿತು ಅದೇ ಆಮ್ ಆದ್ಮಿ . ಸುಮಾರು ದಶಕಗಳ ಕಾಲ ಆಳಿದ ಕಾಂಗ್ರೆಸ್ ನಿರ್ನಾಮವಾಯಿತು . ಯಾವುದೇ ಖಾತೆ ತೆರೆಯದೆ ಆಮ್ ಆದ್ಮಿಗೆ ಉಪಕಾರಿಯಾಯಿತು .
         
          ಹಾಗಂತ ಬಿ ಜೆ ಪಿ ಸೋಲಿಗೂ ಹಲವಾರು ಕಾರಣಗಳಿವೆ 
೧.  ದೆಹಲಿಯಲ್ಲಿ ಚುನಾವಣೆಯಲ್ಲಿ ಚುನಾವಣಾ ಎದುರಿಸಲು ಸ್ತಳೀಯ ಸಮರ್ಥ ನಾಯಕತ್ವದ ಕೊರತೆ
೨. ಕೊನೆ ಕ್ಷಣದಲ್ಲಿ ಕಿರಣ್ ಬೇಡಿಯವರನ್ನು  ಪಕ್ಷಕ್ಕೆ ಕರೆ ತಂದು ಸಿಎಂ  ಅಭ್ಯರ್ಥಿಯೆಂದು ಬಿಂಬಿಸಿದ್ದು  
೩. ಮೋದಿಯವರ ದೂರ ದೃಷ್ಟಿತ್ವದ ಹಲವಾರು ಯೋಜನೆಗಳು ಸಾಮಾನ್ಯ ಹಾಗೂ ಕೆಲ ವರ್ಗದ ಜನರನ್ನು ತಲುಪದೇ    ಬಹುಪಾಲು ಮತಗಳು ಆಪ್ ಪಾಲಾಯಿತು . ಶೇಕಡಾ ೫೦ ರಷ್ಟು ಕೆಳ ಹಾಗೂ ಮದ್ಯಮ ವರ್ಗದ ಜನರ ಮತಗಳು  ಆಪ್  ಪಾಲಾಗಿದೆ .
೪ .ದೇಶದಲ್ಲಿ ಬಿ ಜೆ ಪಿ ಗೆಲುವಿನ ನಾಗಾಲೋಟ ತಡೆಯಲು ಇತರೆ ಪಕ್ಷಗಳು ಅಂದರೆ ಕಾಂಗ್ರೆಸ್ , ಎಸ್ ಪಿ , ಬ ಎಸ್ ಪಿ ,    ಟಿ  ಎಂ ಸಿ, ಜೆ ಡಿ, ಮುಂತಾದ ಪಕ್ಷಗಳು ಒಂದುಗೂಡಿದ್ದು .  
೫. ಮಹಾರ್ರಾಷ್ಟ್ರ , ಹರ್ಯಾಣ, ಝಾರ್ಕಂಡ್ ರಾಜ್ಯಗಳ ಗೆಲುವು ಹಾಗೂ ಕಳೆದ ಲೋಕ ಸಭೆಯಲ್ಲಿ ದೆಹಲಿಯ ಅಭೂತ ಪೂರ್ವ ಗೆಲುವಿನಿಂದ ಉಂಟಾದ ಅತಿಯಾದ ಆತ್ಮ ವಿಶ್ವಾಸ ದೆಹಲಿ ವಿಧಾನ ಸಭಾ ಚುನಾವಣೆಯನ್ನು ಲಘುವಾಗಿ ಪರಿಗಣಿಸುವಂತೆ ಮಾಡಿದ್ದು .
೬. ಕಪ್ಪು ಹಣದ ವಾಪಸಾತಿಯ ಕುರಿತಾಗಿ ಜನರ ಅತಿಯಾದ ನಂಬಿಕೆಯೂ ಸೋಲಿಗೆ ಪ್ರಮುಕ ಕಾರಣವೆಂದರೆ ತಪ್ಪಾಗಲಾರದು .


ದೇಶದಲ್ಲಿ ಕಾಂಗ್ರೆಸ್ ಸ್ಥಿತಿ :

ದೇಶದಲ್ಲಿ ಈಗ ಕಾಂಗ್ರೆಸ್ ಪರಿಸ್ಥಿತಿ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಾಗಿದೆ . ಈಗಾಗಲೇ ಲೋಕ ಸಭೆ ಹಾಗೂ ಹಲವಾರು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಶೋಚನೀಯ ಸೋಲುಂಡ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಎದುರಾಗಿದೆ . ಸುಮಾರು ೧೫ ವರುಷಗಳ ಕಾಲ ದೆಹಲಿಯನ್ನು ಆಳಿದ ರಾಜಕೀಯ ಪಕ್ಷವೊಂದು ಖಾತೆ ತೆರೆಯದೆ ಸೋಲುಂಡದ್ದು ವಿಪಾರ್ಯಾಸ . ಕಾಂಗ್ರೆಸ್ ಈ ಚುನಾವಣೆಯಲ್ಲಿ ಬಿ ಜೆ ಪಿ ಗೆಲ್ಲಲಿಲ್ಲ ಎಂದು ಸಂಭ್ರಮಿಸಬಹುದು ಆದರೆ ಕಾಂಗ್ರೆಸ್ಗೆ ಆಮ್ ಆದ್ಮಿಯ ಗೆಲುವು ಎಚ್ಚರಿಕೆಯ ಕರೆ ಘಂಟೆ . ಯಾಕೆಂದರೆ ದೇಶದಲ್ಲ್ಲಿ ಈವರೆಗೆ ಕಾಂಗ್ರೆಸ್ ಪ್ರಧಾನವಾಗಿದ್ದ ಅಲ್ಪ ಸಂಖ್ಯಾತ ಮತಗಳು ಈಗ ಆಪ್ ನತ್ತ ವಾಲುತ್ತಿವೆ . ದೇಶಾದ್ಯಂತ ಇದು ಹೀಗೆ ನಡೆದರೆ ಮುಂದೊಂದು ದಿನ ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಇತ್ತು ಎಂಬುದನ್ನು ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣ ಬೇಕಾಗಿ ಬರಬಹುದು . ಪ್ರಸ್ತುತ ಕಾಂಗ್ರೆಸ್ ಬುಡ ಗಟ್ಟಿಯಾಗಿ ಇರುವುದೆಂದರೆ ಕೆಲ ಸಣ್ಣ ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದ ಕರ್ನಾಟಕದಲ್ಲಿ ಮಾತ್ರ . ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಹಿಂದೂ ವಿರೋಧಿ ಧೋರಣೆಯಿಂದ ಹೀಗೆ ಕೊಡುಗೆ ನೀಡುತಿದ್ದರೆ ಆ ಕಾಲ ದೂರವಿಲ್ಲ .

ಹೀಗೆ ದೆಹಲಿಯ ಚುನಾವಣಾ ಫಲಿತಾಂಶ ವನ್ನು ಒಟ್ಟಾರೆ ಗಮನಿಸುವುದಾದರೆ ದೆಹಲಿಯಲ್ಲಿ ಆಪ್ ಗೆದ್ದಿತು ........ ಕಾಂಗ್ರೆಸ್ ಸೋತಿತು ........... ಬಿ ಜೆ ಪಿ ಯನ್ನು ಸೋಲಿಸಿತು ...................