Wednesday, February 25, 2015

ಕೆಲವರು ಬೊಬ್ಬಿರಿವರು ....
ಇದೇನಿದು ನೈತಿಕ ಪೋಲಿಸ್ ಗಿರಿ ?
ನಾವಿರುವುದು ಇಪ್ಪತ್ತೊಂದನೆ ಶತಮಾನದಲ್ಲಿ ...... !
ಹೊಂದಿ ಕೊಳ್ಳಿ ಪ್ರಸ್ತುತ ಸನ್ನಿವೆಶಕ್ಕೆಂದು ....

           ಹೌದು ನಾವಿರುವುದು ೨೧ ನೇ ಶತಮಾನದಲ್ಲಿ
            ಆದರೆ ನಮಗಿರುವುದು ಅದೇ ತಾಯಿ , ಅಕ್ಕ,ತಂಗಿ
            ಶತಮಾನ ಕಳೆದರೂ ಅಳಿಸಲಾರೆವು ನಾವು ನಮ್ಮ ಸಂಸ್ಕೃತಿ
            ಹೇಗೆ ಸಹಿಸಲಿ ಜಿಹಾದಿಗಳ ಧರ್ಮಾಂದ ವಿಕೃತಿ

ಬುದ್ದಿ ಜೀವಿಗಳೇ ಆಲಿಸಿ ಸ್ವಲ್ಪ ಇತ್ತ
ಸ್ವಲ್ಪ ಕಣ್ತೆರೆದು ನೋಡಿ ನಿಮ್ಮ ಸುತ್ತ ಮುತ್ತ
ಸಹಾಸ್ರರು ಸಹೋದರಿಯರು ಬಲಿಯಾಗಿಹರು ಕಪಟಿಗಳ ಪ್ರೇಮ ಪಾಶದತ್ತ
ಅವರನ್ನು ಆ ಪಾಪದ ಕೂಪದಿಂದ ಮೇಲೆತ್ತುವುದು ತಪ್ಪಾ ...?

           ವಿದ್ಯಾವಂತ ಮೂರ್ಖರೇ ..........
            ದೇಶವೂ ಮುಂದುವರೆದಿದೆ ......
            ಜೊತೆಗೆ ನಾವು ಬದಲಾಗಬೇಕಿದೆ .......
            ಆದರೆ ಅದು ನಮ್ಮನ್ನು ಇನ್ನೊಬ್ಬರಿಗೆ ಅಡವಿಟ್ಟು ... ಅಲ್ಲ
            ಹಾಗೆ ಆದರೆ .... ಅದು ನಾವು ನಾವಲ್ಲ ..................

Monday, February 23, 2015

ನನ್ನ ಧರ್ಮವ ನಾ ಪ್ರೀತಿಸಿದರೆ ತಪ್ಪೇನು ?
ಯಾಕೆನ್ನುತ್ತೀರಿ ನನ್ನ ಕೊಮುವಾದಿಯೆಂದು .....?
ಅನ್ಯ ಧರ್ಮದ ಮೇಲೆ ನಿಮ್ಮ ಮಮಕಾರ
ಅದೇನು ಜಾತ್ಯಾತೀತ ಮನೋಭಾವದ ಸಾರ ........!

            ನನಗೂ ನಿಮಗೂ ವ್ಯತ್ಯಾಸವಿದೆ
            ನಾನು ಶುದ್ದ ಹಳದಿ ಬಣ್ಣದ ಲೋಹ
           ಆದರೆ ನೀವು ಹಳದಿ ಲೇಪನದ ಕಬ್ಬಿಣ
           ಅದೇ ನಿಮ್ಮ ಬಣ್ಣ ಬದಲಿಸುವ ಗುಣ

ಗೀತೆ ಭೋಧಿಸಿದ್ದು ಅದನ್ನೇ ......
ಬೈಬಲ್ ಹೇಳಿದ್ದು ಅದನ್ನೇ .......
ಕುರಾನ್ ಉದ್ಗರಿಸಿದ್ದು ಅದನ್ನೇ ........
ನಿನಗೆ ನೀನು ಶ್ರೆಷ್ಟನಾಗೆಂದು ... ಸರ್ವರನ್ನು ಪ್ರೀತಿಸೆಂದು

              ಇಲ್ಲ ಸಲ್ಲದ ಹೇಳಿಕೆ ನೀಡುವಿರಿ
              ಧರ್ಮವನ್ನು ಜರಿದು ಮಾತನಾಡುವಿರಿ
              ಇದ್ಯಾರನ್ನು ಮೆಚ್ಚಿಸುವ ಪರಿ
               ಯಾಕೆ ಬಾಳುತ್ತೀರಿ ನಿಮ್ಮ ತನವನ್ನು ಪರರಿಗೆ ಮಾರಿ

ಎದೆ ತಟ್ಟಿ ಹೇಳುವೆನು ನಾನೊಬ್ಬ ಹಿಂದೂ
ಆದರೆ ಅರ್ಥೈಸದಿರಿ ನಾನೊಬ್ಬ ಧರ್ಮಾಂದನೆಂದು ...... !
ರಾಷ್ಟ ಪ್ರೇಮ ಬಂದಾಗ ನಾವೆಲ್ಲಾ ಒಂದು
ಜೈಕಾರ ಹಾಕುವೆ ಭಾರತ ಮಾತೆಗೆ ಎಂದೂ ...........





Wednesday, February 11, 2015

ಆಪ್ ಗೆದ್ದಿತು ........ ಕಾಂಗ್ರೆಸ್ ಸೋತಿತು ........... ಬಿ ಜೆ ಪಿ ಯನ್ನು ಸೋಲಿಸಿತು ...................

ದೆಹಲಿ ಚುನಾವಣಾ ಫಲಿತಾಂಶದ ನಂತರ ನನ್ನ ಮಿತ್ರರೊಬ್ಬರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ನಲ್ಲಿ ಒಂದು ಸಾಲಿನ ಒಂದು ಪೋಸ್ಟ್ ಪ್ರಕಟಿಸಿದ್ದರು . ಆ ಒಂದು ಸಾಲಿನ ವಾಕ್ಯದಲ್ಲಿ ನೂರಾರು ಅರ್ಥಗಳು ಗೋಚರಿಸುತಿದ್ದವು  " ಆಪ್ ಗೆದ್ದಿತು ದೆಹಲಿ ಸೋತಿತು " ನಾನು ಆ ಪೋಸ್ಟ್ ಗೆ ಜಸ್ಟ್ ಒಂದು ಲೈಕ್ ಮಾಡಿದೆ ಯಾವುದೇ ಕಾಮೆಂಟ್ ನೀಡಲಿಲ್ಲ . ಆ ಪೋಸ್ಟ್ ಗೆ ಕಾಮೆಂಟ್ ಮಾಡಲು ಕಾಲಾವಕಾಶ ಬೇಕಿದೆ . ಹೌದು ಯಾರೂ ನಿರೀಕ್ಷಿಸದ ಜಯಭೇರಿ ಆಮ್ ಆದ್ಮಿ ಪಾಲಾಗಿದೆ . ಕೆಜ್ರೇವಾಲರು ಪೂರ್ಣ ಬಹುಮತದೊಂದಿಗೆ ಮುಖ್ಯ ಮಂತ್ರಿಯಾಗುತಿದ್ದಾರೆ . ಸರಿ ಸುಮಾರು ಒಂದು ವರುಷದ ಹಿಂದೆ ೪೯ ದಿನಗಳ ಆಡಳಿತ ನಡೆಸಿ  ರಾಜಿನಾಮೆ ನೀಡಿದ ಕೇಜ್ರೀವಾಲರ ಪೊರಕೆಯನ್ನು ಮತದಾರ ಪ್ರಭು ಮತ್ತೆ ಅಪ್ಪಿ ಕೊಂಡಿದ್ದಾನೆ . ಜನತೆಯ ಆಶೋತ್ತರಗಳನ್ನು ಪೂರೈಸಲು ಆಮ್ ಆದ್ಮಿ ನಾಯಕನಿಗೆ ದೆಹಲಿ ಜನತೆ ಸುವರ್ಣ ಅವಕಾಶ ನೀಡಿದ್ದಾರೆ . ಕಾಂಗ್ರೆಸ್ ಸರಕಾರದ ಮಂತ್ರಿಯೊಬ್ಬರ ( ಕಪಿಲ್ ಸಿಬಲ್) ಸವಾಲನ್ನು ಸ್ವೀಕರಿಸಿ ರಾಜಕೀಯ ಪ್ರವೇಶ ಮಾಡಿದ ಕೇಜ್ರೀವಾಲರು ದೇಶದಲ್ಲಿ ಅದ್ಭುತ ಅಲೆಯೊಂದನ್ನು ಎಬ್ಬಿಸಿದ್ದಾರೆ . ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಬುಡ ಮೇಲು ಮಾಡಿ ದೆಹಲಿ ವಿಧಾನ ಸಭೆಯ ತುಂಬಾ ಆಮ್ ಆದ್ಮಿಗಳು ತುಂಬುವಂತೆ ಮಾಡಿದ್ದಾರೆ . ಕೇಜ್ರೀವಾಲರ ಈ ಗೆಲುವನ್ನು ಕೆಲವರು ಇದು ಮೋದಿ ವಿರುದ್ದದ ಗೆಲುವು , ಮೋದಿ ಅಲೆ ಕಡಿಮೆಯಾಗಿದೆ , ಮೋದಿ ಮ್ಯಾಜಿಕ್ ನಡೆಯಲಿಲ್ಲ .... ಬಿ ಜೆ ಪಿ ನೆಲ ಕಚ್ಚುತಿದೆ ಎಂದು ಬಣ್ಣಿ ಸುತಿದ್ದಾರೆ . ಆದರೆ ನಿಜಾವಾಗಿಯು ಮೋದಿ ಅಲೆ ಕಡಿಮೆಯಾಯಿತೇ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಅರಿವಿಗೆ ಬರುವುದು ಇದು ಬಿ ಜೆ ಪಿ ಯ ಸೋಲಲ್ಲ . ಬದಲಾಗಿ ಇದು ಕಾಂಗ್ರೆಸ್ ಮುಕ್ತ ಭಾರತದ ಮತ್ತೊಂದು ಹೆಜ್ಜೆಯೆಂದು .

        ಹೌದು ೨೦೧೩ ರ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ೨೬,೭೫,೮೫೭ ಮತಗಳನ್ನು ಪಡೆದಿದ್ದರೆ ೨೦೧೫ ರ ವಿಧಾನ ಸಭಾ ಚುನಾವಣೆಯಲ್ಲಿ ೨೯,೩೬,೩೯೦ ಮತಗಳನ್ನು ಪಡೆದಿದೆ . ಅಂದರೆ ಬಿ ಜೆ ಪಿ ಯ ಮತ ಗಳಿಕೆಯಲಿ ವ್ಯತ್ಯಾಸವಾಗಿಲ್ಲ . ಹಾಗಾದರೆ ಆಮ್ ಆದ್ಮಿ ಹೇಗೆ ಗೆಲುವು ಕಂಡಿತು ಎಂಬ ಪ್ರಶ್ನೆ ಬಂದಾಗ ನಮಗೆ ಗೋಚರಿಸುವುದು ಕಾಂಗ್ರೆಸ್ಸನ ಶೋಚನೀಯ ಸ್ಥಿತಿ . ಕಾಂಗ್ರೆಸ್ ದೆಹಲಿಯಲ್ಲಿ ಖಾತೆ ತೆರೆಯದೆ ಸುಮಾರು ೬೩ ಅಭ್ಯರ್ಥಿಗಳು ಟೆವಣಿ ಕಳೆದು ಕೊಂಡದ್ದು ಆಪ್ ಪಾಲಿಗೆ ವರದಾನವಾಯಿತು , ಬಿ ಜೆ ಪಿ ಯನ್ನು ಸೋಲಿಸಿತು ಅಂದರೆ ಕಾಂಗ್ರೆಸ್ ಮತ ಬ್ಯಾಂಕ್ ಸೃಷ್ಟಿಸುತಿದ್ದ ಅಲ್ಪ ಸಂಖ್ಯಾತ ಮತದಾರರಿಗೆ ಕಾಂಗ್ರೆಸ್ ಬಿಟ್ಟು ಇನ್ನೊಂದು ಅವಕಾಶ ಸಿಕ್ಕಿತು ಅದೇ ಆಮ್ ಆದ್ಮಿ . ಸುಮಾರು ದಶಕಗಳ ಕಾಲ ಆಳಿದ ಕಾಂಗ್ರೆಸ್ ನಿರ್ನಾಮವಾಯಿತು . ಯಾವುದೇ ಖಾತೆ ತೆರೆಯದೆ ಆಮ್ ಆದ್ಮಿಗೆ ಉಪಕಾರಿಯಾಯಿತು .
         
          ಹಾಗಂತ ಬಿ ಜೆ ಪಿ ಸೋಲಿಗೂ ಹಲವಾರು ಕಾರಣಗಳಿವೆ 
೧.  ದೆಹಲಿಯಲ್ಲಿ ಚುನಾವಣೆಯಲ್ಲಿ ಚುನಾವಣಾ ಎದುರಿಸಲು ಸ್ತಳೀಯ ಸಮರ್ಥ ನಾಯಕತ್ವದ ಕೊರತೆ
೨. ಕೊನೆ ಕ್ಷಣದಲ್ಲಿ ಕಿರಣ್ ಬೇಡಿಯವರನ್ನು  ಪಕ್ಷಕ್ಕೆ ಕರೆ ತಂದು ಸಿಎಂ  ಅಭ್ಯರ್ಥಿಯೆಂದು ಬಿಂಬಿಸಿದ್ದು  
೩. ಮೋದಿಯವರ ದೂರ ದೃಷ್ಟಿತ್ವದ ಹಲವಾರು ಯೋಜನೆಗಳು ಸಾಮಾನ್ಯ ಹಾಗೂ ಕೆಲ ವರ್ಗದ ಜನರನ್ನು ತಲುಪದೇ    ಬಹುಪಾಲು ಮತಗಳು ಆಪ್ ಪಾಲಾಯಿತು . ಶೇಕಡಾ ೫೦ ರಷ್ಟು ಕೆಳ ಹಾಗೂ ಮದ್ಯಮ ವರ್ಗದ ಜನರ ಮತಗಳು  ಆಪ್  ಪಾಲಾಗಿದೆ .
೪ .ದೇಶದಲ್ಲಿ ಬಿ ಜೆ ಪಿ ಗೆಲುವಿನ ನಾಗಾಲೋಟ ತಡೆಯಲು ಇತರೆ ಪಕ್ಷಗಳು ಅಂದರೆ ಕಾಂಗ್ರೆಸ್ , ಎಸ್ ಪಿ , ಬ ಎಸ್ ಪಿ ,    ಟಿ  ಎಂ ಸಿ, ಜೆ ಡಿ, ಮುಂತಾದ ಪಕ್ಷಗಳು ಒಂದುಗೂಡಿದ್ದು .  
೫. ಮಹಾರ್ರಾಷ್ಟ್ರ , ಹರ್ಯಾಣ, ಝಾರ್ಕಂಡ್ ರಾಜ್ಯಗಳ ಗೆಲುವು ಹಾಗೂ ಕಳೆದ ಲೋಕ ಸಭೆಯಲ್ಲಿ ದೆಹಲಿಯ ಅಭೂತ ಪೂರ್ವ ಗೆಲುವಿನಿಂದ ಉಂಟಾದ ಅತಿಯಾದ ಆತ್ಮ ವಿಶ್ವಾಸ ದೆಹಲಿ ವಿಧಾನ ಸಭಾ ಚುನಾವಣೆಯನ್ನು ಲಘುವಾಗಿ ಪರಿಗಣಿಸುವಂತೆ ಮಾಡಿದ್ದು .
೬. ಕಪ್ಪು ಹಣದ ವಾಪಸಾತಿಯ ಕುರಿತಾಗಿ ಜನರ ಅತಿಯಾದ ನಂಬಿಕೆಯೂ ಸೋಲಿಗೆ ಪ್ರಮುಕ ಕಾರಣವೆಂದರೆ ತಪ್ಪಾಗಲಾರದು .


ದೇಶದಲ್ಲಿ ಕಾಂಗ್ರೆಸ್ ಸ್ಥಿತಿ :

ದೇಶದಲ್ಲಿ ಈಗ ಕಾಂಗ್ರೆಸ್ ಪರಿಸ್ಥಿತಿ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಾಗಿದೆ . ಈಗಾಗಲೇ ಲೋಕ ಸಭೆ ಹಾಗೂ ಹಲವಾರು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಶೋಚನೀಯ ಸೋಲುಂಡ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಎದುರಾಗಿದೆ . ಸುಮಾರು ೧೫ ವರುಷಗಳ ಕಾಲ ದೆಹಲಿಯನ್ನು ಆಳಿದ ರಾಜಕೀಯ ಪಕ್ಷವೊಂದು ಖಾತೆ ತೆರೆಯದೆ ಸೋಲುಂಡದ್ದು ವಿಪಾರ್ಯಾಸ . ಕಾಂಗ್ರೆಸ್ ಈ ಚುನಾವಣೆಯಲ್ಲಿ ಬಿ ಜೆ ಪಿ ಗೆಲ್ಲಲಿಲ್ಲ ಎಂದು ಸಂಭ್ರಮಿಸಬಹುದು ಆದರೆ ಕಾಂಗ್ರೆಸ್ಗೆ ಆಮ್ ಆದ್ಮಿಯ ಗೆಲುವು ಎಚ್ಚರಿಕೆಯ ಕರೆ ಘಂಟೆ . ಯಾಕೆಂದರೆ ದೇಶದಲ್ಲ್ಲಿ ಈವರೆಗೆ ಕಾಂಗ್ರೆಸ್ ಪ್ರಧಾನವಾಗಿದ್ದ ಅಲ್ಪ ಸಂಖ್ಯಾತ ಮತಗಳು ಈಗ ಆಪ್ ನತ್ತ ವಾಲುತ್ತಿವೆ . ದೇಶಾದ್ಯಂತ ಇದು ಹೀಗೆ ನಡೆದರೆ ಮುಂದೊಂದು ದಿನ ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಇತ್ತು ಎಂಬುದನ್ನು ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣ ಬೇಕಾಗಿ ಬರಬಹುದು . ಪ್ರಸ್ತುತ ಕಾಂಗ್ರೆಸ್ ಬುಡ ಗಟ್ಟಿಯಾಗಿ ಇರುವುದೆಂದರೆ ಕೆಲ ಸಣ್ಣ ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದ ಕರ್ನಾಟಕದಲ್ಲಿ ಮಾತ್ರ . ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಹಿಂದೂ ವಿರೋಧಿ ಧೋರಣೆಯಿಂದ ಹೀಗೆ ಕೊಡುಗೆ ನೀಡುತಿದ್ದರೆ ಆ ಕಾಲ ದೂರವಿಲ್ಲ .

ಹೀಗೆ ದೆಹಲಿಯ ಚುನಾವಣಾ ಫಲಿತಾಂಶ ವನ್ನು ಒಟ್ಟಾರೆ ಗಮನಿಸುವುದಾದರೆ ದೆಹಲಿಯಲ್ಲಿ ಆಪ್ ಗೆದ್ದಿತು ........ ಕಾಂಗ್ರೆಸ್ ಸೋತಿತು ........... ಬಿ ಜೆ ಪಿ ಯನ್ನು ಸೋಲಿಸಿತು ...................



        

     

Wednesday, January 21, 2015

ದೆಹಲಿ ಅಧಿಪತ್ಯಕ್ಕೆ ...... ಬೇಡಿಯೋ ..... ಕೆಜ್ರೀವಾಲರೋ .........

ಸುಮಾರು ಎರಡು ವರುಷಗಳ ಹಿಂದೆ ಇಡೀ ಭಾರತಿಯ ಸ್ವಾಭಿಮಾನಿ ಜನತೆ  ಬೀದಿಗಿಳಿದಿತ್ತು . ದೇಶದುದ್ದಕ್ಕೂ ಕ್ಯಾನ್ಸರನಂತೆ ಹರಡಿದ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆದಿತ್ತು . ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದು ಒಬ್ಬ ಹಿರಿಯ ನಾಯಕ ಅವರೇ ಅಣ್ಣಾ ಹಜಾರೆ... ತಮ್ಮ ಇಳಿ ವಯಸಿನಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳು ಹೆಗ್ಗಣಗಳಂತೆ ದೇಶದ ಸಂಪತ್ತನ್ನು ಕೊರೆದು ನುಂಗುತಿದ್ದರೆ ಅವರನ್ನು ಧಿಕ್ಕರಿಸಿ ಹೋರಾಟಗಿಲಿದಿದ್ದರು ... ಅವರಿಗೆ ಇಡೀ ದೇಶದ ಯುವ ಜನತೆ ಬೆಂಬಲವಾಗಿ ನಿಂತಿದ್ದರು . ಅಣ್ಣಾ ಅವರ ಹೋರಾಟದಲ್ಲಿ ಅವರಿಗೆ ಸಾರಥಿಗಲಾಗಿದ್ದು  ಆ ಇಬ್ಬರು ... ಅವರೇ ಅರವಿಂದ ಕೆಜ್ರೇವಾಲ್ ಮತ್ತು ಕಿರಣ್ ಬೇಡಿ .



        ಅರವಿಂದ ಕೆಜ್ರೇವಾಲ ..... ದೆಹಲಿ ಮಾಜಿ ಮುಖ್ಯ ಮಂತ್ರಿ .... ಹುಟ್ಟು ಹೋರಾಟಗಾರ ... ಸುಮಾರು ಒಂದು ವರುಷಗಳ ಹಿಂದೆ ನಾನು ಅವರ ಅಪ್ಪಟ ಅಭಿಮಾನಿ . ಅಣ್ಣಾ ಹಜಾರೆಯವರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಭ್ರಷ್ತಾಚರದ ವಿರುದ್ದ  ಆಳುವ ಕಾಂಗ್ರೆಸ್ಸ್ ಸರಕಾರದ ವಿರುದ್ದ ತೊಡೆ ತಟ್ಟಿ ನಿಂತಿದ್ದವರು .... ಜಂತರ್ ಮಂತರ್ನಲ್ಲಿ  ಜನ ಲೋಕಪಾಲ್ ಜಾರಿಗೆ ಒತ್ತಾಯಿಸಿ ಯುವ ಜನರಲ್ಲಿ ಹೋರಾಟದ ಕಿಚ್ಚನ್ನು ಹತ್ತಿಸಿದವರು .... ಆದರೂ  ಆಳುವ ಕಾಂಗ್ರೆಸ್ಸ್ ಮಾತ್ರ ದೇಶದಲ್ಲಿ ಜನಲೋಕಪಾಲಗೆ ಮನ್ನಣೆ ನೀಡಲಿಲ್ಲ ........ ಕಾಲ ಬದಲಾಯಿತು .... ಕೆಜ್ರೇವಾಲ್ ಬದಲಾದರು ... ಹೋರಾಟದ .. ಹಾದಿ ದಾರಿ ತಪ್ಪಿತು ..... ಅಣ್ಣಾ ಹಜಾರೆಯವರಿಂದ ದೂರವಾದರು .... ಬೀದಿ ಹೋರಾಟ ಸಾಕಾಗಿತ್ತು ... ಆಗಲೇ ಹುಟ್ಟಿ ಕೊಂಡಿದ್ದು ಆಮ್ ಆದ್ಮಿ ಪಾರ್ಟಿ. ಇಡೀ ವ್ಯವಸ್ಥೆಯನ್ನು ಗುಡಿಸಿ ಸ್ವಚ್ಛ ಗೊಳಿಸುವ ಭ್ರಮೆಯಲ್ಲಿ ಹೊಸ  ಪಕ್ಷವನ್ನು ಹುಟ್ಟು ಹಾಕಿದರು . ಅಂದು ಕೊಂಡಂತೆ ವಿವಿಧ ರಂಗಗಳಿಂದ ಹೊಸ ಮುಖಗಳನ್ನು ರಾಜಕೀಯದ ಕಣಕ್ಕಿಳಿಸಿದರು . ದೆಹಲಿಯ ಮತದಾರ ಪೊರಕೆಯನ್ನು ಭರಪೂರ ಅಪ್ಪಿಕೊಂಡ . ಆಳುವ ಕಾಂಗ್ರೆಸ್ ಸರಕಾರವನ್ನು ಗುಡಿಸಿ ಗುಂಡಾಂತರಗೊಳಿಸಿದ . ಆದರೆ ಯಾವುದೇ ಪಕ್ಷ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಆದರೂ ಕೆಜ್ರೇವಾಲ್ ಮುಖ್ಯ ಮಂತ್ರಿಯಾದರು ..... ಅದು ಕೂಡ ಚುನಾವಣಾ ಪೂರ್ವ ತಾವು ಯಾವ ಪಕ್ಷದ ವಿರುದ್ಧ ಹೋರಾಟ ನಡೆಸಿದರೋ ...... ಯಾವ ಪಕ್ಷದ ನಾಯಕರನ್ನು ಭ್ರಷ್ಟರೆಂದು ಕರೆದರೋ .... ಅದೇ ಪಕ್ಷದ ಬೆಂಬಲ ಪಡೆದು ...... ಹೌದು ಕಾಂಗ್ರೆಸ್ಸ್ ಪಕ್ಷ ಕೆಜ್ರೇವಾಲ್ ಪಕ್ಷದ ಜುಟ್ಟು ಹಿಡಿದು ಬೆಂಬಲ ನೀಡಿತ್ತು . ... ಆದ್ರೆ ಕೆಜ್ರೇವಾಲ್ ವರಿಗೆ ಇದು ತಿಳಿಯಲಿಲ್ಲ . ಅವರು ಅಧಿಕಾರ ಸ್ವೀಕರಿಸುವ ಉತ್ಸಾಹದಲ್ಲಿದ್ದರು .... ... ಅಧಿಕಾರ ಸ್ವೀಕರಿಸುವಾಗ ದೆಹಲಿ ಜನತೆಗೆ ಭರಪೂರ ಭರವಸೆ ನೀಡಿದರು . ಸರಕಾರಿ ಬಂಗಲೆ , ಕಾರು, ಭದ್ರತೆ ... ತಿರಸ್ಕರಿಸಿದರು ... ಆದರೆ ಅದು ಕೆಲವೇ ದಿನ ... ಮತ್ತೆ ಆ ಸವಲತ್ತುಗಳನ್ನು ಪಡೆದುಕೊಂಡರು . ಆದರೂ ಕೆಜ್ರೇವಾಲ್ ಸರಕಾರ ಆಡಿದ್ದು ಕೇವಲ ೪೮ ದಿನಗಳ ಆಟ ... ಅಷ್ಟರಲ್ಲಿ ಅವರ ಸರಕಾರದ ಹಲವು ವಿಕೆಟುಗಳು ಪತನಗೊಂಡಿದ್ದವು ...... ವಿನೋದ್ ಬಿನ್ನಿ ಎಂಬ ಆಪ್ ನಾಯಕ ಭಿನ್ನ ಮತಕ್ಕೆ ನಾಂದಿ ಹಾಡಿದರೆ , ಇನ್ನೊಬ್ಬ ನಾಯಕ ನಡು ರಾತ್ರಿಯಲ್ಲಿ ವಿದೇಶಿ ಮಹಿಳೆಯ ಮನೆ ಮೇಲೆ ವೇಶ್ಯಾವಾಟಿಕೆ ಆರೋಪದಲ್ಲಿ ದಾಳಿ ನಡೆಸಿದರು .. ಸಾಲದು ಎಂಬಂತೆ ಆಳುವ ಸರಕಾರದ ಮುಖ್ಯ ಮಂತ್ರಿಯೇ ಪೋಲಿಸ್ ವ್ಯವಸ್ತೆಯ ವಿರುದ್ಧ ಬೀದಿಗಿಳಿದಿದ್ದರು ..... ಎಂತಾ ವಿಪಾರ್ಯಾಸ ..... ಪ್ರಹಸನದ ಕೊನೆಯ ದೃಶ್ಯ ವೆಂಬಂತೆ ಕೆಜ್ರೇವಾಲ್ ರಾಜಿನಾಮೆ ನೀಡಿದ್ದರು ..... ಇದು ಕೆಜ್ರೇವಾಲ್ ಅವರು ೪೮ ದಿನಗಳಲ್ಲಿ ಆಮ್ ಆದ್ಮಿಗೆ ನೀಡಿದ ಮನರಂಜನೆಯ ದೃಶ್ಯ .


                   ಕಿರಣ್ ಬೇಡಿ  ಭಾರತದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಹಾಗೂ ಸಾರ್ವಜನಿಕ ಸೇವಕರಾಗಿ ಪ್ರಸಿದ್ಧಿ ಪಡೆದವರಾಗಿದ್ದಾರೆ .     ಭಾರತದಲ್ಲಿ ಪೋಲೀಸ್ ಸೇವೆ ಸೇರಿದ ಮೊದಲ ಭಾರತೀಯ ಮಹಿಳೆ ಕಿರಣ್ ಬೇಡಿ. ಕಿರಣ್ ಬೇಡಿ ಅವರು ಪೊಲೀಸ್ ವೃತ್ತಿಯಲ್ಲಿ ಎದುರಿಸಿರುವ ಸವಾಲುಗಳಂತೆ ಗಳಿಸಿರುವ ಯಶಸ್ಸು ಹಾಗೂ ಜನಪ್ರಿಯತೆ ಕೂಡಾ ಅಪಾರ. ಗಣ್ಯವ್ಯಕ್ತಿಗಳ ಭದ್ರತೆ, ಸಂಚಾರ ಸಮಸ್ಯೆಗಳ ನಿವಾರಣೆ, ಮಾದಕವಸ್ತು ಚಟುವಟಿಕೆಗಳ ನಿಯಂತ್ರಣ ಮುಂತಾದ ಹಲವು ರೀತಿಯ ಸವಾಲುಗಳನ್ನು; ರಾಜಕೀಯ ಒತ್ತಡಗಳನ್ನು, ಸಾಮರ್ಥ್ಯ ತೋರಿದಾಗಲೆಲ್ಲಾ ನಿಷ್ಕ್ರಿಯರನ್ನಾಗಿಸುವಂತಹ ರಾಕ್ಷಸೀಯ ಭಯ ಹುಟ್ಟಿಸುವ ವ್ಯವಸ್ಥೆಗಳನ್ನು; ಹೀಗೆ ಯಾವುದಕ್ಕೂ ಅಂಜದೆ, ಅಳುಕದೆ ಧೈರ್ಯವಾಗಿ ಎದುರಿಸಿ ಕಿರಣ್ ಬೇಡಿ ಅವರು ತೋರಿದ ಸಾಮರ್ಥ್ಯ ಅಸಾಧಾರಣವಾದದ್ದು.ಸಿನಿಮಾಗಳ ದೆಸೆಯಿಂದಲೋ, ಭ್ರಷ್ಟತೆ, ಒರಟು ತನಗಳ ಮೇಲ್ಮೈಯಿಂದಲೋ ಯಾವಾಗಲೂ ದೊಣ್ಣೆ ತಿರುಗಿಸುವ, ಅವಾಚ್ಯ ಪದ ಪ್ರಯೋಗಗಳ ಚಿತ್ರಣ ಕಾಣುವ ಪೋಲೀಸ್ ಇಲಾಖೆಗೆ ಸವಿನಯ ಸ್ಪರ್ಶ ಮುಖೇನ ಕ್ರಾಂತಿ ತರುವ ವಿಶಿಷ್ಟ ಪ್ರಯೋಗ ನಡೆಸಿದವರು ಕಿರಣ್ ಬೇಡಿ. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆಸಿನಿಮಾಗಳ ದೆಸೆಯಿಂದಲೋ, ಭ್ರಷ್ಟತೆ, ಒರಟು ತನಗಳ ಮೇಲ್ಮೈಯಿಂದಲೋ ಯಾವಾಗಲೂ ದೊಣ್ಣೆ ತಿರುಗಿಸುವ, ಅವಾಚ್ಯ ಪದ ಪ್ರಯೋಗಗಳ ಚಿತ್ರಣ ಕಾಣುವ ಪೋಲೀಸ್ ಇಲಾಖೆಗೆ ಸವಿನಯ ಸ್ಪರ್ಶ ಮುಖೇನ ಕ್ರಾಂತಿ ತರುವ ವಿಶಿಷ್ಟ ಪ್ರಯೋಗ ನಡೆಸಿದವರು ಕಿರಣ್ ಬೇಡಿ. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆಸಿನಿಮಾಗಳ ದೆಸೆಯಿಂದಲೋ, ಭ್ರಷ್ಟತೆ, ಒರಟು ತನಗಳ ಮೇಲ್ಮೈಯಿಂದಲೋ ಯಾವಾಗಲೂ ದೊಣ್ಣೆ ತಿರುಗಿಸುವ, ಅವಾಚ್ಯ ಪದ ಪ್ರಯೋಗಗಳ ಚಿತ್ರಣ ಕಾಣುವ ಪೋಲೀಸ್ ಇಲಾಖೆಗೆ ಸವಿನಯ ಸ್ಪರ್ಶ ಮುಖೇನ ಕ್ರಾಂತಿ ತರುವ ವಿಶಿಷ್ಟ ಪ್ರಯೋಗ ನಡೆಸಿದವರು ಕಿರಣ್ ಬೇಡಿ. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆ. ಸಮಾಜ ಸೇವೆಯಿಂದ ಪ್ರಸಿದ್ದಿ ಪಡೆದಿರುವ ಕಿರಣ್ ಬೇಡಿಯವರು ಈಗ ರಾಜಕೀಯಕ್ಕೆ ದುಮುಕ್ಕಿದ್ದಾರೆ.... ಅದು ಭಾರತೀಯ ಜನತಾ ಪಾರ್ಟಿಯ ಮುಖ್ಯ ಮಂತ್ರಿ ಅಭ್ಯರ್ಥಿಯಾಗಿ . ಪ್ರಧಾನಿ ಮೋದಿಯವರ ಆಡಳಿತ ಮೆಚ್ಚಿ ಪಕ್ಷಕ್ಕೆ ಕಾಲಿತ್ತಿದ್ದಾರೆ.


                 ಈಗ ದೆಹಲಿಯಲ್ಲಿ ಅಣ್ಣಾ ಸಾರಥಿಗಳ ಕಾಳಗ .... ಒಂದು  ಕಾಲದಲ್ಲಿ ರಾಜಕೀಯ ನಾಯಕರ ವಿರುದ್ದ ಸಮರ ಸಾರಿದವರು ... ಈಗ ತಾವೇ ಪ್ರಮುಖ ರಾಜಕೀಯ ನಾಯಕರಾಗಿದ್ದಾರೆ ..... ಅಣ್ಣಾ ಒಬ್ಬಂಟಿಯಗಿದ್ದಾರೆ . ಆದರೂ ಅವರ ಭ್ರಷ್ಟಾಚಾರದ ವಿರುದ್ದ ನಡೆಸಿದ ಹೋರಾಟದ ವೇದಿಕೆ ಅವರ ಸಾರಥಿಗಳಿಗೆ .... ರಾಜಕೀಯ ಅಡಿಪಾಯ ಹಾಕಿದ್ದು ಸುಳ್ಳಲ್ಲ .... ದೆಹಲಿಗೆ ಕಿರಣ್ ಬೇಡಿ ಅಶಾ ಕಿರಣವಾಗುತ್ತಾರೋ ....... ಅಥವಾ ಅರವಿಂದ ಕೆಜ್ರೇವಲಾರು .... ಅರಸರಗುತಾರೋ ..... ಕಾಡು ನೋಡ ಬೇಕು ....... ದುರದೃಷ್ಟವೆಂದರೆ  ದಶಕಗಳ ಕಾಲ ಆಳಿದ ಆಳಿದ ಕಾಂಗ್ರೆಸ್ಸ್ ಪರಿಸ್ಥಿತಿ ...... ಆಟಕ್ಕುಂಟು ... ಲೆಕ್ಕಕ್ಕಿಲ್ಲ ....... ಮಾಡಿದ್ದುಣ್ಣೋ ಮಾರಾಯ ... ಎಂಬ ಗಾದೆ ಎಷ್ಟು ಅರ್ಥ ಪೂರ್ಣವಲ್ಲವೇ ...............?