Wednesday, June 25, 2014

ಇದು ದೇಶದ ಒಬ್ಬ ಅತ್ಯುತ್ತಮ ಅರ್ಥ ಪಂಡಿತನನ್ನು ದುರ್ಬಲ ಗೊಳಿಸಿದ ಕಾಂಗ್ರೆಸ್ಸ್ ಗೆ ದೊರೆತ ಶಾಪವಲ್ಲವೆ...........?



ಲವು ದಿನಗಳಿಂದ ನನ್ನ ಮನಸಿನಲ್ಲಿ ಏನೋ ಕಸಿವಿಸಿ  ಏನೋ ಬರೆಯಬೇಕೆಂದು ಪೆನ್ನು ಕೈಗೆತ್ತಿಕೊಂಡಾಗ ಆ ವ್ಯಕ್ತಿಯನ್ನು ಜರಿದು ಬರೆಯಬೇಕಲ್ಲ ಎಂಬ ತಳಮಳ ಎಷ್ಟೇ ಪ್ರಯತ್ನಿಸಿದರೂ ಬರೆಯಲಾಗುತ್ತಿಲ್ಲ .. ಹೌದು ಆ ಒಬ್ಬ ವ್ಯಕ್ತಿಯ ಒಂದು ಪಾತ್ರವನ್ನು ಜರಿದು ಬರೆಯಬೇಕೆಂದರೆ ಇನ್ನೊಂದು ಪಾತ್ರ ಅಡ್ಡಿ ಬರುತಿತ್ತು ...... totali ..Confusion ........

      ನಾನು ಬರೆಯಬೇಕೆಂದು ಕೊಂಡದ್ದು ಇಡೀ ದೇಶ ಯಾರನ್ನು ದುರ್ಬಲ, ಅಸಮರ್ಥ, ಮೌನಿ ದುರಂತ ನಾಯಕನೆಂದು ಕರೆಯಿತೋ ... ಅವರೇ ಮನಮೋಹನ್ ಸಿಂಗ್ ....... ಮನಮೋಹನ್ ಸಿಂಗ್ ದೇಶವನ್ನು ದಶಕಗಳ ಕಾಲ ಆಳಿದ ಪ್ರಧಾನಿ .. ಹಲವಾರು ಬದಲಾವಣೆ ... ಯೋಜನೆಗಳಿಗೆ ಅಡಿಪಾಯ ಹಾಕಿದವರು . ಅನೇಕ ಭಾರತೀಯರು ಸಿಂಗ್ ಅವರನ್ನು ಕೇವಲ ಪ್ರಧಾನಿಯಾಗಿ ಕಂಡರೂ ಅವರೊಳಗಿನ ಒಬ್ಬ ಉತ್ತಮ ಅರ್ಥ ಪಂಡಿತನನ್ನು ಗುರುತಿಸುವಲ್ಲಿ ವಿಫಲರಾದರು.  
   
ದೇಶದ ಪ್ರಧಾನಿಯಾಗಿ ಸಿಂಗ್ ಅವ್ರ ಕಾರ್ಯ ವೈಖರಿಯನ್ನು ಹೊಗಳುವ ಕಾರ್ಯವನ್ನು ಖಂಡಿತ ನಾನು ಮಾದಲಾರೆ.... ಅಂತಹ ಘನ ಕಾರ್ಯವನ್ನೆನೂ ಅವರು ಮಾಡಿಲ್ಲ . ಹಗರಣಗಳ ಸರಮಾಲೆಯನ್ನೇ ತನ್ನ ಆಡಳಿತದ ಅವಧಿಯಲ್ಲಿ ಪೋಣಿಸಿದ ಸಿಂಗ್ ಅವರನ್ನು ಹೀಗೆ ಹೊಗಳಲಿ ..... .... ಆದರೇ ಇದೇ ಪ್ರಧಾನಿ ತಾವು ಒಬ್ಬ ಉತ್ತಮ ಅರ್ಥ ಪಂಡಿತರಾಗಿ ಹಣಕಾಸು ಮಂತ್ರಿಯಾಗಿದ್ದ ಅವಧಿಯಲ್ಲಿ ದೇಶವನ್ನು ದಿವಾಳಿಯನ್ಚಿನಿಂದ ಪಾರು ಮಾಡಿದ ಮಹಾನ್ ವ್ಯಕ್ತಿ ಎಂದು ನೆನೆಸಿಕೊಂಡಾಗ ಇವರೇನಾ ..... ಅವರು ಎಂದು ಅನುಮಾನ ಮೂಡುತ್ತದೆ . 

  ೧೯೯೧ ಅಂದಿನ ಪ್ರಧಾನಿಯಾಗಿದ್ದವರು ಪಿ . ವಿ . ನರಸಿಂಹರಾವ್ . ಅವರ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಮಂತ್ರಿಯಾಗಿ ಮಾಡಿದ ಕಾರ್ಯವನ್ನು ಇಡೀ ದೇಶದ ನೆನಪಿನಲ್ಲಿ ಉಳಿಯುವನ್ತದ್ದು . ಕಾಂಗ್ರೆಸ್ಸ್ ಪಕ್ಷದಿಂದ ಆಯ್ಕೆಯಾದ ಒಬ್ಬ ದಕ್ಷ ಪ್ರಧಾನಿ ನರಸಿಂಹರಾವ್ ಅವರು ಹಾಗೂ ಸಿಂಗ್  ಅವರು ಭಾರತೀಯ ಆರ್ಥಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದರು . ದಿವಾಳಿಯತ್ತ ಸಾಗುತಿದ್ದ ಭಾರತವನ್ನು ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದರು . ಭಾರತಿಯ ಆರ್ಥಿಕತೆಯಲ್ಲಿ ಖಾಸಗೀಕರಣವನ್ನು ಪರಿಚಯಿಸಿ ದೋಲಾಮಯನವಾಗಿದ್ದ ಭಾರತದ ಆರ್ಥಿಕತೆಗೆ ಸ್ಥಿರತೆ ತಂದು ಕೊಟ್ಟರು . ಆದ್ರೆ ಅದೇ ಅಂದಿನ ಪ್ರಧಾನಿ ರಾವ್ ಅವರು ದೇಶದ ಉತ್ತಮ ನಾಯಕರಾಗಲಿಲ್ಲ . ಕಾಂಗ್ರೆಸ್ಸಿಗರು ನೆಹರು , ರಾಜೀವ್, ಇಂದಿರಾರನ್ನು ನೆನೆಸಿಕೊಳ್ಳುವಂತೆ ನೆನಪಾಗಲಿಲ್ಲ . ಹೌದು ಅವರೇನು ಗಾಂಧೀ ಕುಟುಂಬದವರಲ್ಲ ....... ಗಾಂಧೀ ಕುಟುಂಬಕ್ಕೆ ವಿಧೆಯರಾಗಿರಲಿಲ್ಲ ...... ... ಇನ್ನು ಮನಮೋಹನ್ ಸಿಂಗ್ ಅವರು ಗಾಂಧೀ ಕುಟುಂಬಕ್ಕೆ ವಿಧೇಯರಾಗಿದ್ದರು ... ಆದರೇ ಅದೇ ಅವರ ವಿಧೇಯತೆ ಜಗತ್ತೇ ಅವರನ್ನು ದುರ್ಬಲ ಅಸಮರ್ಥನೆಂದು ಜರಿಯುವಂತೆ ಮಾಡಿತು . ಇದಕ್ಕೆ ಕಾರಣ ಯಾರು?.. ಸೋನಿಯಾ ಗಾಂಧೀ ...? ....... ರಾಹುಲ್ ಗಾಂಧೀ ?...  ಅಥವಾ ಮನಮೋಹನ್ ಸಿಂಗ್ ಅವರ ಅಧಿಕಾರಾದಾಸೆ ? ..... ದೇಶದ ಅತ್ಯುನ್ನತ್ತ ಅಧಿಕಾರವನ್ನು ಸ್ವೀಕರಿಸಬೇಕೆಂಬುದು ಪ್ರತಿಯೊಬ್ಬ ಭಾರತಿಯನ ಆಸೆ .... ಆದ್ರೆ ಇದೇ ಆಸೆ ಸಿಂಗ್ ಅವರಿಗೆ ಮುಳುವಾಯಿತೇ ......... ಅಧಿಕಾರದ ಆಸೆಯೇ ಅವರನ್ನು ಮೌನ ವ್ರತಕ್ಕೆ ದೂಡಿತೆ ?... ಅವರ ಮೌನದಿಂದ ಎಷ್ಟೊಂದು ಹಗರಣಗಳು ಹುಟ್ಟಿ ಕೊಂಡವು ...... ೨ಜೀ , ಕಾಮನ್ವೆಲ್ತ್ , ವೋಟಿಗಾಗಿ ನೋಟು , ಕಲ್ಲಿದ್ದಲು ,ಹೆಲಿಕಾಪ್ತರ್...... ಹೀಗೆ ಆಕಾಶ , ಭೂಮಿ , ಪಾತಾಳದಲ್ಲೂ ಹುಟ್ಟಿ ಕೊಂಡ ಹಗರಣಗಳಿಗೆ ಸಿಂಗ್ ಅವರು ಕಾರಣರೇ ? ... ಅಥವಾ ಅವರ ಹೆಸರಿನಲ್ಲಿ ಆಳ್ವಿಕೆ ನಡೆಸಿದ  ಕೈಗಳು ಕಾರಣವೇ ?..... ಇವೆಲ್ಲವೂ ಈಗ ನಿಷ್ಪ್ರಯೋಜಕ ಪ್ರಶ್ನೆಗಳು . 

   ಕಳೆದ ದಶಕಗಳಿಂದ ದೇಶಕ್ಕೆ ಒಬ್ಬರೇ ಪ್ರಧಾನಿಯಿದ್ದರೂ ದೇಶವನ್ನಾಳಿದ್ದು ..... ಎರಡು ಪ್ರಧಾನಿಗಳು ... ಒಂದು ಮೌನಿ ಪ್ರಧಾನಿ ಮನಮೋಹನ್ ಸಿಂಗ್ .. ಇನ್ನೊಂದು ಸೂಪರ್ ಪಿ ಎಂ ಸೋನೀಯಾಜಿ ..... ಕಡೆ ಕಡೆಗೇ ಬಂದದ್ದು ಸೋನಿಯಾಜಿ ಸುಪುತ್ರ  ಕಾಂಗ್ರೆಸ್ಸಿಗರ ಬಾಯಲ್ಲಿ ಭಾವಿ ಪ್ರಧಾನಿ ಎಂದು ಕರೆಯಲ್ಪಡುತಿದ್ದ ರಾಹುಲ್ ಜಿ .... ಯುಪಿಎ ಸರಕಾರವೆಂಬ ನಾಟಕದಲ್ಲಿ ರಾಹುಲ್ ಅಂಕಕ್ಕೆ ಪರದೆ ಬೀಳುವಾಗ ರಂಗ ಪ್ರವೇಶ ಮಾಡಿದರೂ ..... ಜನರನ್ನು ಚೆನ್ನಾಗೆ ರಂಜಿಸಿದರು . ಸುಗ್ರೀವಾಜ್ಞೆ ಬಗ್ಗೆ ಅವರಾಡಿದ ರೋಷ ಭರಿತ ಹೇಳಿಕೆ ......  ಸಿಂಗ್ ಅವ್ರ ನಿರ್ಧಾರದ ಬಗ್ಗೆ ನಾನ್ ಸೆನ್ಸ್ ಕಾಮೆಂಟ್ ಗೆ ದೇಶದ ಜನ ರಾಹುಲ್ ಗೆ  ಸರಿಯಾದ ಉಡುಗೊರೆ ನೀಡಿದರು . ೨೦೧೪ ರ ಲೋಕ ಸಭಾ ಚುನಾವಣೆಯ ಉಸ್ತುವಾರಿ ಹೊತ್ತಿದ್ದ  ೪೪ ರ ನವ ಯುವಕನಿಗೆ ಜನ ೪೪ ಸಂಸದರ ಉಡುಗೊರೆ ನೀಡಿದರು ......... ಇತಿಹಾಸದಲ್ಲೇ ಕೇಳರಿಯದ ಸೋಲುಂಡ ಕಾಂಗ್ರೆಸ್ಸ್ ಪ್ರಾದೇಶಿಕ ಪಕ್ಷಗಳ ಸಾಲಿಗೆ ಬಂದು ನಿಂತಿತು . ಇದು ದೇಶದ ಒಬ್ಬ ಅತ್ಯುತ್ತಮ ಅರ್ಥ ಪಂಡಿತನನ್ನು ದುರ್ಬಲ ಗೊಳಿಸಿದ ಕಾಂಗ್ರೆಸ್ಸ್ ಗೆ ದೊರೆತ ಶಾಪವಲ್ಲವೆ...........?

  ಸದಾ ಬೆಲೆಯೇರಿಕೆ ,ಹಗರಣಗಳಿಂದ ಕಂಗೆಟ್ಟಿದ್ದ ಭಾರತಕ್ಕೆ ನಿರೀಕ್ಷೆಯಂತೆ ಮೋದಿ ಅವ್ರ ಸದೃಡ ನಾಯಕತ್ವ ದೊರೆತಿದೆ . ವಿಶ್ವದ ಪ್ರಸಿದ್ದ ರಾಷ್ಟ್ರಗಳು ಸ್ನೇಹ ಹಸ್ತ ಚಾಚುತಿವೆ. ಆದರೇ ಆಡಳಿತದ ಆರಂಭದಲ್ಲೇ ರೈಲ್ವೆ ಮತ್ತಿತರ ಬೆಲೆ ಏರಿಕೆ  ಕಂಡಿರುವುದು ದೇಶದ ಜನರಲ್ಲಿ ಆತಂಕ ಮೂಡಿಸಿದೆ . ಆದರೆ ದೇಶದ ಆರ್ಥಿಕತೆಯನ್ನು ಪುನಶ್ಚೇತನ ಗೊಳಿಸಲು ಇದು ಅನಿವಾರ್ಯ . ನಷ್ಟದ ಕೂಪ ಹಿಡಿದ ರೈಲ್ವೆ ಇಲಾಖೆಗೆ ಮರು ಜೀವ ನೀಡಲು ಮಾಡಿದ ಗಟ್ಟಿ ನಿರ್ಧಾರ . ಬುದ್ಧಿ ಜೀವಿಗಳೇ ಒಮ್ಮೆ ಯೋಚಿಸಿ ಹಲವು ರಾಜ್ಯಗಳ ವಿಧಾನ ಸಭಾ ಚುನವಾಣೆ ಸಮೀಪಿಸುತಿರುವಾಗ ಯಾವುದೇ ರಾಜಕೀಯ ಪಕ್ಷಗಳು ಬೆಲೆಯೇರಿಕೆಯಂತ ಕೆಟ್ಟ ನಿರ್ಧಾರ ತೆಗೆದು ಕೊಳ್ಳಲು ಬಯಸುವುದಿಲ್ಲ . ಅಂತಹ ನಿರ್ಧಾರ ಕೈಗೊಳ್ಳುವುದು ದೇಶದ ಬಗ್ಗೆ ಕಳ ಕಳಿ ಇರುವ ನಾಯಕತ್ವ ಮಾತ್ರ , ದೇಶವನ್ನಾಳುವ ಸದೃಡ ಸರಕಾರದ ದಿಟ್ಟ ಹೆಜ್ಜೆ ಎಂದರೆ ಅತಿಶೊಕ್ತಿಯಿಲ್ಲ. .......... ...ಽಅದ್ರೆ ಇದು ದಶಕಗಳ ನಂತರ ದೊರೆತದ್ದು ವಿಪರ್ಯಾಸ  . 

                                                                              ರಾಜೇಶ್  ಶೆಟ್ಟಿ