Monday, March 17, 2014

ದೇಶಕ್ಕಾಗಿದೇಶಕ್ಕಾಗಿ ನೀನು ಕುಣಿಕೆಗೆ ಕೊರಳಿತ್ತೆ ಆದ್ರೇ ...


ದೇಶಕ್ಕಾಗಿದೇಶಕ್ಕಾಗಿ ನೀನು ಕುಣಿಕೆಗೆ ಕೊರಳಿತ್ತೆ ಆದ್ರೇ . ಇವ್ರು 





ಪ್ರೀತಿಯ ದೇಶ ಭಕ್ತ ಭಗತ್ ,

                                 ಹೌದು ಮಾರ್ಚ್ ೨೩ ಸಮೀಪಿಸುತಿದ್ದಂತೆ ನಿನ್ನೊಂದಿಗೆ ಏನೋ ಕೆಲ ವಿಷಯಗಳನ್ನು ಹಂಚಿಕೊಳ್ಳಬೇಕೆಂದು ನನ್ನ ಮನಸ್ಸು ತುಡಿಯುತ್ತಿದೆ ನೀನು ದೇಶಕ್ಕಾಗಿ ನಿನ್ನ ಪ್ರಾಣವನ್ನೇ ಮುಡಿಪಾಗಿಸಿದ ಆ ದಿನ ಬಂದಾಗ ನನಗೇನೋ ತಳಮಳವಾಗುತಿದೆ . ಈ ಪತ್ರದಲ್ಲಿ ಕೆಲ ಸತ್ಯ ಸಂಗತಿಗಳನ್ನು ಬರೆಯುತಿದ್ದೇನೆ ನಿನ್ನ ಮನಸಿಗೆ ವೇದನೆಯಾಗಬಹುದು ದಯವಿಟ್ಟು ಈ ನತದೃಷ್ಟ ಭಾರತೀಯನನ್ನು ಕ್ಷಮಿಸು .
     
                        ಹೌದು ಭಾರತಕ್ಕೆ ನಿಮ್ಮಂತಹ ಕೆಚ್ಚೆದೆಯ ವೀರರಿಂದ ಸ್ವಾತಂತ್ರ್ಯ ಬಂತಾದರೂ  ನಾವು ಈಗಲೂ ನತದೃಷ್ಟ ಭಾರತೀಯರು .... ಹೌದು ಈ ಹಾಳಾದ ವ್ಯವಸ್ಥೆ ,ರಾಜಕೀಯ ಅನಾಚಾರದ ಕೂಪ ಹಿಡಿದ ಸಮಾಜ ನಮ್ಮೆಲ್ಲರನ್ನು ನತದೃಷ್ಟರನ್ನಾಗಿಸಿದೆ . ಒಂದೆಡೆಯಿಂದ ಕೋಮು ಕೋಮುಗಳ ನಡುವೆ ದಳ್ಳುರಿ ಹುಟ್ಟಿಕೊಂಡರೆ ಇನ್ನೊಂದೆಡೆ ನಮ್ಮನ್ನಾಳುವ ರಾಜಕೀಯ ಮಹಾನಾಯಕರು ಉರಿಯುವ ಬೆಂಕಿಗೆ ತುಪ್ಪ ಹಾಕಿ ಜ್ವಾಲೆಯನ್ನು ಪ್ರಜ್ವಲಿಸುತಿದ್ದಾರೆ. ಸ್ವಾರ್ಥ ಸಾಧನೆಗೆ ಅಮಾಯಕರನ್ನು ಬಲಿ ಪಶುಗಳನ್ನಾಗಿ ಮಾಡಿ ತಮ್ಮ ಬೆಳೆ ಬೆಯಿಸುತಿದ್ದಾರೆ. ಆಶ್ವಾಸನೆಗಳ ಮಹಾಪೂರವನ್ನು ಹರಿಸಿ ಮೂರ್ಕರನ್ನಾಗಿಸುತಿದ್ದಾರೆ .

                    ನೀನು ಕಂಡ ಭವ್ಯ ಭಾರತ, ಪಾಪಿ ಬ್ರಿಟಿಷರನ್ನು ಹೊಡೆದೋಡಿಸಲು ನೀ ನಡೆಸಿದ ಸಾಹಸ ನಾವು ಇತಿಹಾಸದಲ್ಲಿ ಕಂಡಿದ್ದೇವೆ . ಆದ್ರೆ ಸ್ವಾತಂತ್ರ್ಯ ಬಂದ ಕೂಡಲೇ ಭವ್ಯ ಭಾರತವು ಕೆಲವೇ ಕೆಲ ವಿಕೃತ ಮನಸುಗಳ ಕೃತ್ಯದಿಂದ ಇಬ್ಭಾಗವಾಯಿತು . ಅಲ್ಲಿಂದಲೇ ಹುಟ್ಟಿಕೊಂಡಿತು ಪಾಪಿ ಪಾಕಿಸ್ತಾನದ ನೀಚ ಕೃತ್ಯ ,ನೀನಾ ಎನ್ನುವ ಕಪಟ ಚೀನಾದ ಉಪಟಳ ಇವೆರಡೂ ಪಾಪಿಗಳು ಸೇರಿ ಭಾರತ ಮಾತೆಯ ಮುಡಿಯನ್ನು ಸುಡುತಿವೆ . ನಮ್ಮ ವೀರ ಯೋಧರ ರುಂಡವನ್ನು ಪಾಪಿಗಳು ಚೆನ್ದಾಡಿದರೂ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿರುವ ಭಾರತ ಇಂತ ಹುಚ್ಚು ನಾಯಿಗಳನ್ನು ಎದುರಿಸಲು ಸಮರ್ಥ ನಾಯಕತ್ವವಿಲ್ಲದೆ ಹೆಣಗಾದುತಿದೆ .

              ಭಾರತಾಂಬೆಯ ಮುಡಿಗೆ ಪಾಪಿ ಪಾಕಿಸ್ತಾನ , ಚೀನಾ ಕೊಲ್ಲಿಯಿಡುತಿದ್ದರೆ ಮಾತೆಯ ಒಡಲನ್ನು ಒಡೆಯಲು ನಮ್ಮಲ್ಲೇ ದುರುಳರು ಹುಟ್ಟು ಕೊಂಡಿದ್ದಾರೆ . ರಾಜಕೀಯದ ದೊಂಬರಾಟ ,ಅಧಿಕಾರದ ದರ್ಪ ಬಳಸಿಕೊಂಡು ಮಾತೆಯ ಮಡಿಲಲ್ಲಿರುವ ಸಂಪತ್ತನ್ನು ಕೊಳ್ಳೆ ಹೊಡೆದು ದೇಶವನ್ನೇ ಮಾರಲು ಹೊರಟಿದ್ದಾರೆ . ಅಭಿವೃದ್ದಿ ಹೆಸರಿನಲ್ಲಿ ಸಾಲು ಸಾಲು ಹಗರಣಗಳ ಸರಮಾಲೆಯನ್ನು ಕಟ್ಟಿದ್ದಾರೆ . ಅಂದು ಮಾರ್ಚ್ ೨೩ ರಂದು ನೀನು ದೇಶಕ್ಕಾಗಿ ಕುಣಿಕೆಗೆ ಕೊರಳಿತ್ತೆ .. ಆದ್ರೆ ಇವ್ರು ... ... ಭಾರತ ಮಾತೆಯ ಕೊರಳಿಗೆ  ಕುಣಿಕೆ ಬಿಗಿಯತಿದ್ದಾರೆ. ಇಷ್ಟು ಮಾತ್ರವಲ್ಲದೆ ದೇಶವೇ ತಲೆ ತಗ್ಗಿಸುವಂತಹ ೨ಜಿ ,ಕಾಮನೆವೆಲ್ತ್ ,ಕಲ್ಲಿದ್ದಲು,ಗಣಿ ಹಗರಣಗಳಿಂದ ಕೋಟ್ಯಂತರ ಹಣ ಗಳಿಸಿ ತಮ್ಮ ವಂಶಾಪಾರಂಪರ್ಯ ರಾಜಕಾರಣದ ಮೇಲೆ ಭವ್ಯ ಬಂಗಲೆ ಕತ್ತುತಿದ್ದಾರೆ. ಇವೆಲ್ಲದರಿಂದ ಭಾರತ ಜರ್ಜರಿತವಾಗಿದೆ.

               ಸ್ತ್ರೀಯರನ್ನು ಪೂಜಿಸುವ ಈ ನೆಲದಲ್ಲಿ ನಾರಿಯು ನ್ಯಾಯದ ನೆರಲಿಲ್ಲದೆ ನರಳುತಿದ್ದಾಳೆ  ಎಲ್ಲಿ ನೋಡಿದರೂ ಅತ್ಯಾಚಾರ,ಕೊಲೆ ,ಸುಲಿಗೆ,ಒಟ್ಟಿನಲ್ಲಿ ಈ ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀಯರ ರಕ್ಷಣೆ,ಕಲ್ಯಾಣ,ಸಬಲೀಕರಣ ಎಂಬ ಮಾತುಗಳು ಕೃತಿಗೆ ಮಾತ್ರ ಸೀಮಿತವಾಗಿದೆ. ಪಾಪಿ ಕಾಮ ಪಿಶಾಚಿಗಳು ಸ್ತ್ರೀಯನ್ನು ಭೋಗದ ವಸ್ತುವಂತೆ ಉಪಯೋಗಿಸಿ ತಮ್ಮ ವಿಕೃತ ರೂಪವನ್ನು ಪ್ರದರ್ಶಿಸುತಿವೆ . ಆದ್ರೆ ಇಷ್ಟೆಲ್ಲಾ ನಡೆಯುತಿದ್ದರೂ ಆಳುವ ಸರಕಾರ ಕುರುಡಾಗಿದೆ ..................... ಹೌದು ಇದು ನೀ ಕಂಡ ಭವ್ಯ ಭಾರತದ ಇಂದಿನ ಅಸಲಿ ರೂಪ .............. ಲೇಖನಿ ಹಿಡಿದು ಬರೆಯುವ ನನ್ನ ಕೈಗಳು ಮನಸಿನ ನೋವಿನಿಂದ ತಡಕಾಡುತಿವೆ ....... ಆದರೇ ನೀನು ಖಡ್ಗ ಹಿಡಿದು ಮಾತೆಯ ರಕ್ಷಣೆಗೆ ಹೋರಾಡಿದವನು .............ದಯ ಮಾಡಿ ನನ್ನನು ಕ್ಷಮಿಸು .................. ನಿನ್ನ ಮನಸಿನ ವೆದನೆಗೆ.....

     ಪತ್ರದ ಕೊನೆ ಹಂತಕೆ ತಲುಪಿದ್ದೇನೆ  ಈ ಸಮಯದಲ್ಲಾದರೂ ನಿನಗೊಂದು ಸಿಹಿ ಸುದ್ದಿಯನ್ನು ಹೇಳಲೇಬೇಕಾಗಿದೆ ..... .. ಹೌದು ......... ಹಾಳು ಕೂಪ ದಾರಿ ತಲುಪಿದ ಭಾರತಕ್ಕೆ ಎಲ್ಲೋ ಒಂದು ಆಶಾಕಿರಣ ಗೋಚರಿಸುತಿದೆ ..... ಬಲಿಷ್ಠ ಭಾರತಕ್ಕೆ ಬೇಕಾದೆ ಸಿಂಹ ಗರ್ಜನೆಯ ನಾಯಕನೊಬ್ಬ ಬರುತಿದ್ದಾನೆ.......... ದೇಶದ ಉಳಿವು ಅವನಿಂದ ಮಾತ್ರ ಸಾದ್ಯ ...... ಅವನೊಬ್ಬ ಸಾಮಾನ್ಯ ಚಾಯ್ ವಾಲ ................................ ಖಂಡಿತ ನಿನಗೆ ಮತ್ತೊಂದು ಸಿಹಿ ಸುದ್ದಿಯೊಂದಿಗೆ ಮೇ ೧೬ ರಂದು ಪತ್ರ  ಬರೆಯುತ್ತೇನೆ ..................................................
             
                                                                                             ಇತೀ ನಿನ್ನ
                                                                                             ಭಾರತೀಯ